ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ 3 ನೇ ಒಮಿಕ್ರಾನ್ ಕೇಸ್ ಗುಜರಾತ್‌ನಲ್ಲಿ ಪತ್ತೆ

ಗುಜರಾತ್:ಭಾರತಕ್ಕೆ ಒಮಿಕ್ರಾನ್ ವೈರಸ್ ಕಾಲಿಟ್ಟಾಗಿದೆ. ಕರ್ನಾಟಕದಲ್ಲಿ ಎರಡು ಕೇಸ್ ಪತ್ತೆ ಆಗಿದ್ರೆ ಒಮಿಕ್ರಾನ್ ಮೂರನೇ ಕೇಸ್ ಈಗ ಗುಜರಾತ್ ನಲ್ಲಿ ಪತ್ತೆಯಾಗಿ ಸಂಚಲನ ಸೃಷ್ಟಿಸಿದೆ.

ಗುಜರಾತ್‌ನ ಜಾಮ್‌ನಗರದ ವ್ಯಕ್ತಿಯಲ್ಲಿ ಈಗ ಒಮಿಕ್ರಾನ್ ವೈರಸ್ ಪತ್ತೆ ಆಗಿದೆ.ಜಿಂಬಾವ್ವೆಯಿಂದ ಗುಜರಾತ್‌ನ ಜಾಮ್‌ನಗರಕ್ಕೆ ಈ ವ್ಯಕ್ತಿ ಪ್ರಯಾಣ ಬೆಳೆಸಿದ್ದನು.ವಿಮಾನ ನಿಲ್ದಾಣದಲ್ಲಿ ನಡೆಸಿದ್ದ ಟೆಸ್ಟ್ ನಲ್ಲಿ ಕೊರೊನಾ ಬಂದಿರೋದು ತಿಳಿದಿತತು.

ಆದರೆ ಜೀನೋಮ್ ಪರೀಕ್ಷೆ ಬಳಿಕವೇ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ಈ ವ್ಯಕ್ತಿಗೆ ತಗುಲಿದೆ ಅಂತಲೇ ಗೊತ್ತಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.

Edited By :
PublicNext

PublicNext

04/12/2021 03:46 pm

Cinque Terre

44.21 K

Cinque Terre

2