ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಟಕವಾಗುತ್ತಿದೆ ಒಮಿಕ್ರಾನ್ : ವಿದೇಶದಿಂದ ಬಂದ 12 ಪ್ರಯಾಣಿಕರಲ್ಲಿ ಕೊರೊನಾ ಪತ್ತೆ

ನವದೆಹಲಿ: ಹೆಮ್ಮಾರಿ ಸೋಂಕು ಕೊರೊನಾ ಮಧ್ಯೆ ಇದೀಗ ರೂಪಾಂತರ ಸೋಂಕು ಒಮಿಕ್ರಾನ್ ಜನರ ನೆಮ್ಮದಿ ಕಸಿಯುತ್ತಿದೆ.

ಸದ್ಯ ಒಮಿಕ್ರಾನ್ ಆತಂಕದಿಂದಾಗಿ ಎಲ್ಲೇಡೆ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆ ಕಳೆದ ಮೂರು ದಿನಗಳಿಂದ ಅಂತರರಾಷ್ಟ್ರೀಯ ವಿಮಾನಗಳಲ್ಲಿ ದೇಶಕ್ಕೆ ಆಗಮಿಸಿರುವ 12 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೋವಿಡ್ ದೃಢಪಟ್ಟಿರುವ ಎಲ್ಲಾ ಪ್ರಯಾಣಿಕರನ್ನು ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ(ಎಲ್ ಎನ್ ಜೆಪಿ) ಆಸ್ಪತ್ರೆಗೆ ದಾಖಲಿಸಿದೆ. ಒಮಿಕ್ರಾನ್ ರೂಪಾಂತರದ ಕುರಿತ ಹೆಚ್ಚಿನ ಪರೀಕ್ಷೆಗಾಗಿ ಈ ಎಲ್ಲಾ 12 ಪ್ರಯಾಣಿಕರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

Edited By : Nirmala Aralikatti
PublicNext

PublicNext

04/12/2021 07:31 am

Cinque Terre

55.53 K

Cinque Terre

6