ಬೆಂಗಳೂರು: ರಾಜ್ಯದಲ್ಲಿ ಎರಡು ಓಮೈಕ್ರಾನ್ ಪತ್ತೆಯಾಗಿದ್ದು, ಜಿನೋಮ್ ಸೀಕ್ವೆನ್ಸ್ ಗೆ ಕಳಿಸಲಾತ್ತು. ಸಂಬಂಧಪಟ್ಟ ವ್ಯಕ್ತಿಗಳನ್ನ ಪ್ರೈಮರಿ ಮತ್ತು ಸೆಕೆಂಡರಿ ಐಸೋಲೇಟ್ ಮಾಡಲಾಗಿದೆ. ಈ ವೈರಸ್, ಸಮಸ್ಯೆ ಹೇಗೆ ಬರಲಿದೆ ಎಂದು ಅಧ್ಯಯನ ಮಾಡಲಾಗಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಬೇರೆ ಬೇರೆ ದೇಶದಲ್ಲಿ ಈಗಾಗಲೇ ಈ ವೈರಸ್ ಕಾಣಿಸಿಕೊಂಡಿದೆ.
ಕೇವಲ ದೈಹಿಕವಾಗಿ ಸೋರ್‌ನೆಸ್, ಮಾಂಸ ಕಂಡ ನೋವು ಕಾಣಿಸಿಕೊಳ್ಳಲಿದೆ. 11ದೇಶಗಳ ಸ್ಥಿತಿಗತಿ ನೋಡಿಕೊಂಡು ಕ್ರಮ ತೆಗೆದುಕೊಂಡಿದ್ದೇವೆ. ಇದು ವೇಗವಾಗಿ ಹರಡುತ್ತದೆ, ಆದ್ರೆ ಜೀವಕ್ಕೆ ಅಪಾಯ ಇಲ್ಲವೆಂದರು.
ಸರ್ಕಾರ ಕಟ್ಟೆಚ್ಚರ ವಹಿಸಿದೆ,
ಬೇರೆ ಬೇರೆ ದೇಶಕ್ಕೆ ಹರಡೋದನ್ನ ತಡೆಗಟ್ಟೋ ಕೆಲಸ ಆಗ್ತಿದೆ.
ಕಡ್ಡಾಯವಾಗಿ ತಪಾಸಣೆ ಆಗಿದ್ರೂ, ರಿಪೋರ್ಟ್ ಬರೋವರೆಗೂ ಅವರನ್ನ ಕಳಿಸೋದಿಲ್ಲ. ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಕಳಿಸಲಾಗುವುದು.ಮಹಾರಾಷ್ಟ್ರ ದಿಂದ ಬರ್ತಿರೋರಿಗೆ RTPCR ಟೆಸ್ಟ್ ಕಡ್ಡಾಯ. ನೆಗೆಟಿವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳಲಾಗುವುದೆಂದರು.
ವಿಧಾನಸೌಧ ಸೆಕ್ರೆಟರಿಯೇಟ್ ಇಂದಲೂ ಅಧಿವೇಶನ ಬೇಡ ಅಂತ ಹೇಳಿದ್ದಾರೆ.ಸಿಎಂ ಕೂಡ ಗಮನ ಹರಿಸೋಣ ಅಂತ ಹೇಳಿದ್ದಾರೆ.ಸವಾಲು ಮತ್ತು ಬೇಡಿಕೆ ಎರಡೂ ಇದೆ. ಸಿಎಂ ಬಂದ ಬಳಿಕ ಸಭಾಪತಿ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಬಹಳ ಮುಖ್ಯವಾಗಿ ಇಂದು ಕೋವಿಡ್ 19 ಓಮೈಕ್ರಾನ್ ವೈರಸ್ ಸೋಂಕಿನ ಕಾಯಿಲೆಯಾಗಿದೆ. ಹೆಚ್ಚಿನ ಭಯ ಬೇಡ. ಮೊದಲ ಕೆಲಸ ವ್ಯಾಕ್ಸಿನ್ ಪಡೆಯೋದು. ಕೋವಿಶೀಲ್ಡ್, ಕೋ ವ್ಯಾಕ್ಸಿನ್ ಪಡೆಯಿರಿ.
ಒಂದೂ ಲಸಿಕೆ ಪಡೆಯದವರು ಒಂದಾದರೂ ಲಸಿಕೆ ಪಡೆಯಿರಿ ಎಂದರು.
ಮುಂದಿನ ದಿನ ಮಾಲ್, ಥಿಯೇಟರ್ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ.ಸಿನಿಮಾ ಥಿಯೇಟರ್ ನಡೆಸಲು ಅನುಮತಿ ಇದೆ.ಸಿನಿಮಾ, ರೆಸ್ಟೋರೆಂಟ್, ಎಲ್ಲವೂ ನಡೆಯಲಿದೆ.ಏನೇ ನಡೆದ್ರೂ ಮಾಸ್ಕ್ ಕಡ್ಡಾಯ.
ಯಾವುದೇ ಬಂದ್ ಆಗೋದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
PublicNext
02/12/2021 06:11 pm