ಗದಗ: ಹೆಮ್ಮಾರಿ ಸೋಂಕಿನಿಂದ ಕಂಗೆಟ್ಟಿದ್ದ ಮಂದಿಗೆ ಇದೀಗ ಓಮಿಕ್ರಾನ್ ಕಾಟ ಶುರುವಾಗಿದೆ. ಇನ್ನು ಓಮಿಕ್ರಾನ್ ತಡೆಗೆ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇರಿಸಿದೆ.
ಸದ್ಯ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಿಗೆ ಗದಗ ರೈಲ್ವೆ ನಿಲ್ದಾಣದಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಮಾಡುತ್ತಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮುಬೈನಿಂದ ಗದಗಗಿಗೆ ಬಂದ ರೈಲು ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಇನ್ನು ಟೆಸ್ಟ್ ಗೆ ನಿರಾಕರಿಸಿದ ಪ್ರಯಾಣಿಕರ ಮನವಲಿಸಿ ಆರೋಗ್ಯ ಸಿಬ್ಬಂದಿಗಳು ಟೆಸ್ಟ್ ಮಾಡುತ್ತಿದ್ದಾರೆ.
ಆದರೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯ ಕೊರತೆಯಿಂದಾಗಿ ಆರಾಮಾಗಿಯೇ ಹೊರ ರಾಜ್ಯದಿಂದ ಬರುವವರು ಯಾವುದೇ ಟೆಸ್ಟ್ ಇಲ್ಲದೆಯೇ ಒಳ ಬರುತ್ತಿದ್ದಾರೆ.
ಇದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡುವಂತ್ತಾಗಿದೆ. ಅಷ್ಟೇ ಅಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಮನವಿಗೆ ಕಿವಿಗೊಡದೆ ಜನ ನುಸುಳಿ ಹೋಗುತ್ತಿದ್ದಾರೆ.
ಇನ್ನು ಆರೋಗ್ಯ ಇಲಾಖೆ ಮೂವರು ಸಿಬ್ಬಂದಿಯಿಂದ ಟೆಸ್ಟಿಂಗ್.. ಮೂವರು ಸಿಬ್ಬಂದಿ ವ್ಯಾಕ್ಸಿನೇಷನ್ ಗೆ ಮೀಸಲು ಇರಿಸಿದೆ. ಸೆಕೆಂಡ್ ಡೋಸ್ ಆಗದ ಜನರಿಗೆ ರೈಲ್ವೆ ಲಸಿಕೆ ನೀಡುವ ಕಾರ್ಯ ಚುರುಕಾಗಿದೆ.
PublicNext
01/12/2021 02:42 pm