ಕೊಪ್ಪಳ: ನಾನ್ ಹಿಂಗ ಸಾಯಲಿ ನನಗ ಲಸಿಕೆ ಬ್ಯಾಡ, ನನಗ ಪಗಾರ ಮಾಡಸು, ಆಧಾರ ಕಾರ್ಡು ಮಾಡಸು, ಆದ್ರ ನಾನಂತೂ ಇಂಜೆಕ್ಷನ ಮಾಡಿಸಿಕೊಳ್ಳಲ್ಲ ಹಿಂಗೆ ವೃದ್ದೆ ರಂಗಮ್ಮ ಲಸಿಕೆ ನಿರಾಕರಿಸಿ ರಾದ್ಧಾಂತ ಮಾಡಿದ್ದಾಳೆ.
ಕುಷ್ಟಗಿ ತಾಲೂಕಿನ ತುಮರಿಕೊಪ್ಪದ ವೃದ್ದೆಗೆ ಶನಿವಾರ ವಿಶೇಷ ಲಸಿಕಾ ಅಭಿಯಾನದಲ್ಲಿ ಲಸಿಕೆ ಹಾಕುವಾಗ ಈ ಘಟನೆ ನಡೆದಿದೆ. ಆರೋಗ್ಯ ಇಲಾಖೆ, ಪೊಲೀಸರು ಎಷ್ಟೇ ಯತ್ನಿಸಿದರೂ ಲಸಿಕೆ ನಿರಾಕರಿಸಿದ್ದರು ವೃದ್ದೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೃದ್ದೆಯ ವೀಡಿಯೋ ವೈರಲ್ ಆಗಿದೆ.
PublicNext
28/11/2021 11:29 am