ಧಾರವಾಡ: ಕಳೆದ ಎರಡು ದಿನಗಳ ಅವಧಿಯಲ್ಲಿ ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ 204 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಮೊದಲ ದಿನ 66, ಎರಡನೇ ದಿನ 116 ಹಾಗೂ ಮೂರನೇ ದಿನವಾದ ಇಂದು 22 ಜನರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಎಸ್‌ಡಿಎಂ ಕಾಲೇಜಿನ ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಈ ಕೊರೊನಾ ಸ್ಪೋಟಗೊಂಡಿದೆ. ಅನೇಕರನ್ನು ಇನ್ನೂ ತಪಾಸಣೆಗೊಳಪಡಿಸಲಾಗಿದ್ದು, ಅವರ ವರದಿ ಮಧ್ಯರಾತ್ರಿ ಲಭ್ಯವಾಗಲಿದೆ.
PublicNext
26/11/2021 10:16 pm