ಬೆಂಗಳೂರು ; ಹೆಮ್ಮಾರಿ ಸೋಂಕಿಗೆ ಮದ್ದಾಗಿರುವ ಕೊರೊನಾ ಲಸಿಕೆ ಪಡೆದ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಲಕ್ಷ್ಮಣನಗರದಲ್ಲಿ ನಡೆದಿದೆ.
ವ್ಯಾಕ್ಸಿನ್ ನಂತರ ಮಂಗಳಾ(36) ಸಾವನ್ನಪ್ಪಿದ್ದ ದುರ್ದೈವಿ ಮಹಿಳೆ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 11.20 ಸುಮಾರಿಗೆ ಹೆಗ್ಗನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದ ಮಂಗಳಾ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಮಂಗಳಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮಂಗಳಾ ಆಸ್ಪತ್ರೆ ಸೇರುವ ಮೊದಲೇ ಸಾವನ್ನಪ್ಪಿದ್ದಾರೆ.
ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಲಸಿಕೆ ಪಡೆದು ಸಾವನ್ನಪ್ಪಿದ ಮಹಿಳೆಯ ಸಾವಿಗೆ ನಿಖರ ಕಾರಣ ಮರಣೋತ್ತರ ವರದಿ ಬಳಿಕ ಬಹಿರಂಗವಾಗಲಿದೆ.
PublicNext
22/10/2021 09:02 pm