ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಮಕ್ಕಳಿಗೂ ಕೊರೊನಾ ವ್ಯಾಕ್ಸಿನ್

ನವದೆಹಲಿ : 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಗೆ ಅನುಮತಿ ದೊರೆತಿದೆ. 20 ದಿನದ ಅಂತರದಲ್ಲಿ ಲಸಿಕೆಯ ಎರಡು ಡೋಸ್ ಪಡೆಯಬಹುದು ಎಂದು ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಲಸಿಕೆ ತುರ್ತು ಬಳಿಕೆಗೆ ಒಪ್ಪಿಗೆ ನೀಡಲಾಗಿದೆ.

ಕೊರೊನಾ ನಿರೋಧಕ ಲಸಿಕೆ ಅಭಿಯಾನದ ಮುಂದಿನ ಹಂತವಾಗಿ 18 ವರ್ಷದೊಳಗಿನ ಮಕ್ಕಳಿಗೆ ಶೀಘ್ರದಲ್ಲಿಯೇ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಎಂಬ ಲಸಿಕೆ ಉತ್ಪಾದಕ ಕಂಪನಿ ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಸೆಪ್ಟೆಂಬರ್ ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್ ನ 2 ಮತ್ತು 3ನೇ ಹಂತದ ಪ್ರಯೋಗಗಳನ್ನು ಭಾರತ್ ಬಯೋಟೆಕ್ ಪೂರ್ಣಗೊಳಿಸಿತು. ಈ ತಿಂಗಳ ಆರಂಭದಲ್ಲಿ ಪ್ರಯೋಗದ ವರದಿಯನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಸಲ್ಲಿಸಲಾಗಿತ್ತು

ಪ್ರಯೋಗದ ವರದಿಯ ಮೇಲೆ ನಡೆದ ವಿವರವಾದ ಚರ್ಚೆಯ ಬಳಿಕ 2 ರಿಂದ 18 ವರ್ಷದ ವಯೋಮಾನದವರಿಗೆ ತುರ್ತು ಬಳಕೆಗೆ ಕೋವಾಕ್ಸಿನ್ ಲಸಿಕೆಗೆ ತಜ್ಞರ ಸಮಿತಿ ಅನುಮೋದನೆ ನೀಡಿದೆ.

ಆದರೆ, ಡಬ್ಲ್ಯುಎಚ್ ಒ ಕೋವಾಕ್ಸಿನ್ ಗೆ ತುರ್ತು ಬಳಕೆಯ ಅಧಿಕಾರವನ್ನು ಇನ್ನೂ ನೀಡಿಲ್ಲ. ಭಾರತ್ ಬಯೋಟೆಕ್ ಜುಲೈ 9 ರೊಳಗೆ ಡಬ್ಲ್ಯುಎಚ್ ಒಗೆ ಪಟ್ಟಿ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಆದರೆ. ಈವರೆಗೂ ಅನುಮತಿ ನೀಡಿಲ್ಲ.

Edited By : Nirmala Aralikatti
PublicNext

PublicNext

12/10/2021 01:17 pm

Cinque Terre

36.54 K

Cinque Terre

2