ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಫಾ ವೈರಸ್ ಶಂಕೆ: ಮಂಗಳೂರಿನಲ್ಲಿ ಸ್ವಯಂ ತಪಾಸಣೆಗೆ ಒಳಗಾದ ವ್ಯಕ್ತಿ

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್​ ಭೀತಿ ಹೆಚ್ಚಾಗುತ್ತಿದ್ದಂತೆ, ಗಡಿಜಿಲ್ಲೆಯಾದ ದ.ಕ.ಜಿಲ್ಲೆಯಲ್ಲೂ ಆತಂಕ ಕಾಡುತ್ತಿದೆ. ಇದೀಗ ಗೋವಾ ಮೂಲದ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿ ನಿಫಾ ವೈರಸ್ ಶಂಕೆಯಿಂದ ಸ್ವಯಂ ತಪಾಸಣೆಗೆ ಒಳಗಾಗಿದ್ದಾರೆ. ನಾಳೆಯೊಳಗೆ ಇದರ ವರದಿ ಬರುವ ಸಾಧ್ಯತೆಯಿದೆ.

ಮಂಗಳೂರಿನಲ್ಲಿ ತಪಾಸಣೆಗೊಳಪಟ್ಟಿರುವ ಶಂಕಿತ ವ್ಯಕ್ತಿಯು ಗೋವಾದಲ್ಲಿ ಆರ್​ಟಿ-ಪಿಸಿಆರ್​ ಕಿಟ್ ತಯಾರಿಸುವ ಲ್ಯಾಬ್​ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್​ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಇವರಿಗೆ ಜ್ವರ ಕಾಣಿಸಿಕೊಂಡು ಗುಣಮುಖನಾಗಿದ್ದರೂ, ಅವರಿಗೆ ತನಗೆ ನಿಫಾ ವೈರಸ್​ ಕಾಣಿಸಿಕೊಂಡಿರಬಹುದೆಂಬ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಅವರು ಸ್ವಯಂ ತಪಾಸಣೆಗೊಳಗಾಗಿದ್ದಾರೆ‌.

ಶಂಕಿತ ವ್ಯಕ್ತಿ ಗೋವಾದಿಂದ ಕಾರವಾರಕ್ಕೆ ಆಗಮಿಸಿ, ಅಲ್ಲಿಂದ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ಬಂದಿದ್ದಾರೆ. ಇವರ ಮಾದರಿಯನ್ನು ಪಡೆದಿರುವ ಆರೋಗ್ಯ ಇಲಾಖೆಯು ತಪಾಸಣೆ ನಡೆಸಲು ಲ್ಯಾಬ್ ಗೆ ಕಳುಹಿಸಿ ಕಟ್ಟಿದೆ. ಇಂದು ಅಥವಾ ನಾಳೆ ಇದರ ವರದಿ ಬರಲಿದೆ ಎನ್ನಲಾಗಿದೆ. ಶಂಕಿತ ವ್ಯಕ್ತಿಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.

Edited By : Nagaraj Tulugeri
PublicNext

PublicNext

14/09/2021 10:40 am

Cinque Terre

54.03 K

Cinque Terre

0