ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ರಾಜಧಾನಿಯಲ್ಲಿ ಡೆಲ್ಟಾ ರೂಪಾಂತರಿ ಉಪ ವಂಶಾವಳಿ ಪತ್ತೆ: ಹುಷಾರಾಗಿರಿ

ಬೆಂಗಳೂರು: ರಾಜಧಾನಿಯ ಜನರನ್ನು ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 3ನೇ ಅಲೆಯು ಬೆಂಬಿಡದೇ ಕಾಡುತ್ತಿದೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಮಾರಕ ಡೆಲ್ಟಾ ರೂಪಾಂತರದ ಎರಡು ಉಪ-ವಂಶಾವಳಿ ವೈರಸ್ ಪ್ರಭೇದಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಮೂಡಿದೆ.

SARSCoV-2 ಡೆಲ್ಟಾ ರೂಪಾಂತರದ ಎರಡು ಉಪ-ವಂಶಾವಳಿಗಳಾದ-AY4 ಮತ್ತು AY12-ಬೆಂಗಳೂರಿನ ಮಾದರಿಗಳಲ್ಲಿ ಪತ್ತೆಯಾಗಿದ್ದು, ಬದಲಾಗುತ್ತಿರುವ ವೈರಸ್ ಬಗ್ಗೆ ತಜ್ಞರಲ್ಲಿ ಆತಂಕ ಮೂಡಿಸಿದೆ. ಮತ್ತು ಈ ಉಪ ವಂಶಾವಳಿಗಳು ವ್ಯಾಕ್ಸಿನೇಷನ್ ಮೂಲಕ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ತಪ್ಪಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಎಂದು ಹೇಳಲಾಗಿದೆ.

Edited By : Nagaraj Tulugeri
PublicNext

PublicNext

09/09/2021 06:59 pm

Cinque Terre

38.43 K

Cinque Terre

4