ಬೆಂಗಳೂರು: ಹೆಮ್ಮಾರಿ ಸೋಂಕಿನ ಕಂಟಕ ಕಡಿಮೆಯಾಗುತ್ತಿದೆ ಎಂದು ನಿಟ್ಟುಸಿರು ಬಿಟ್ಟ ಜನಕ್ಕೆ ಕೊವಿಡ್ ಮತ್ತೆ ಶಾಕ್ ನೀಡಿದೆ. ತನ್ನ ಪ್ರಾಬಲ್ಯ ಇನ್ನು ಕ್ಷೀಣಿಸಿಲ್ಲ ಎನ್ನುವ ಎಚ್ಚರಿಕೆ ನೀಡುವಂತೆ ಇಂದು ರಾಜ್ಯದ 1,102 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಡೆಡ್ಲಿ ಸೋಂಕಿಗೆ 17 ಜನ ಸೋಂಕಿತರು ಮೃತಪಟ್ಟಿದ್ದಾರೆ. 1458 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.64 ರಷ್ಟಿದೆ. ಇಂದು 1,69,621 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ 17,058 ಸಕ್ರಿಯ ಪ್ರಕರಣಗಳಿವೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 338 ಜನರಿಗೆ ಸೋಂಕು ತಗುಲಿದ್ದು, 05 ಸೋಂಕಿತರು ಮೃತಪಟ್ಟಿದ್ದಾರೆ. 277 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 7,119 ಸಕ್ರಿಯ ಪ್ರಕರಣಗಳಿವೆ.
PublicNext
08/09/2021 06:08 pm