ಕೋಲ್ಕತ್ತಾ: ಖ್ಯಾತ ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ ಅವರು (54) ಕೋವಿಡ್ ವಿರುದ್ಧದ ಎರಡು ತಿಂಗಳ ಹೋರಾಟದ ಬಳಿಕ ಪಶ್ಚಿಮ ಬಂಗಾಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ನಿಧನರಾಗಿದ್ದಾರೆ.
ಸುಭಂಕರ್ ಬ್ಯಾನರ್ಜಿ ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಈ ವಿಚಾರವನ್ನು ಸುಭಂಕರ್ ಬ್ಯಾನರ್ಜಿ ಅವರ ಪುತ್ರ ಅರ್ಚಿಕ್ ಬ್ಯಾನರ್ಜಿ ಫೇಸ್‌ಬುಕ್‌ನಲ್ಲಿ 'ಲಾಸ್ಟ್' ಎಂದು ಪೋಸ್ಟ್ ಮಾಡಿದ್ದಾರೆ. ಬ್ಯಾನರ್ಜಿ ಅವರನ್ನು ಜೂನ್ 20ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಕಾಲ ಅವರಿಗೆ ಆಮ್ಲಜನಕದ ನೆರವು ನೀಡಲಾಗಿತ್ತು.
ಬ್ಯಾನರ್ಜಿ ಅವರ ಪಾರ್ಥಿವ ಶರೀರವನ್ನು ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಇರಿಸಲಾಗಿದ್ದು, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.
ಖ್ಯಾತ ತಬಲಾ ಕಲಾವಿದ ಜಾಕೀರ್ ಹುಸೇನ್ ಟ್ವೀಟ್ ಮಾಡಿ, 'ನನಗೆ ಅವರು ಬಹಳ ನೆನಪಾಗುತ್ತಿದ್ದಾರೆ. ತಬಲಾ ಪ್ರಪಂಚ ಮತ್ತು ಭಾರತೀಯ ಸಂಗೀತ ಕ್ಷೇತ್ರ ಅವರನ್ನು ನೆನಪಿಸಿಕೊಳ್ಳಲಿದೆ' ಎಂದು ಸಂತಾಪ ಸೂಚಿಸಿದ್ದಾರೆ.
PublicNext
26/08/2021 02:15 pm