ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿಂದು 1,259 ಜನರಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿಂದು 1,259 ಜನರಿಗೆ ಕೊರೊನಾ ಸೋಂಕು ಅಂಟಿದೆ. ಇಂದು ಸೋಂಕಿನಿಂದ 1,701 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೆಮ್ಮಾರಿ ಸೋಂಕಿಗೆ 29 ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಪಾಸಿಟಿವಿಟಿ ದರ ಶೇಕಡ 0.65% ರಷ್ಟು ಇದೆ. ಇಂದು 1,90,915 ಪರೀಕ್ಷೆ ನಡೆಸಲಾಗಿದೆ. 19,784 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 295 ಜನರಿಗೆ ಸೋಂಕು ತಗಲಿದ್ದು, ಸೋಂಕಿನಿಂದ ಸುಧಾರಿಸಿಕೊಂಡ 371 ಜನ ಬಿಡುಗಡೆಯಾಗಿದ್ದಾರೆ. ಡೆಡ್ಲಿ ಸೋಂಕಿಗೆ 11 ಜನ ಸಾವನ್ನಪ್ಪಿದ್ದಾರೆ. 7,582 ಸಕ್ರಿಯ ಪ್ರಕರಣಗಳು ಇವೆ.

Edited By : Nirmala Aralikatti
PublicNext

PublicNext

24/08/2021 05:59 pm

Cinque Terre

34.17 K

Cinque Terre

0