ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೊಂದು ಕೊವಿಡ್ ಲಸಿಕೆ : ಝಿಕೊವ್-ಡಿ ತುರ್ತು ಬಳಕೆಗೆ ಅನುಮತಿ

ನವದೆಹಲಿ: ಹೆಮ್ಮಾರಿ ಸೋಂಕು ಕೋವಿಡ್ ಗೆ ಮತ್ತೊಂದು ಲಸಿಕೆ ಲಭಿಸಿದೆ. ಝಿಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝಿಕೊವ್-ಡಿ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಒಪ್ಪಿಗೆ ಸಿಕ್ಕಿದೆ.

ಮೂರು ಡೋಸ್ ನ ಝಿಕೊವ್-ಡಿ ಕೊರೊನಾ ಲಸಿಕೆಯನ್ನು ಅಹಮದಾಬಾದ್ ಮೂಲದ ಝಿಡಸ್ ಕ್ಯಾಡಿಲಾ ಕಂಪನಿ ತಯಾರಿಸಿದೆ. ಕಳೆದ ತಿಂಗಳಷ್ಟೇ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಡೋಸ್ ಕೊವಿಡ್ ಲಸಿಕೆಗೆ ಭಾರತದಲ್ಲಿ ಅನುಮತಿ ಸಿಕ್ಕಿತ್ತು. ಅದರ ಬೆನ್ನಲ್ಲೇ ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಝಿಕೋವ್-ಡಿ ಲಸಿಕೆ ಬಳಕೆಗೆ ಅನುಮತಿ ಸಿಕ್ಕಿದೆ.

3 ಡೋಸ್ ಗಳ ಈ ಝಿಕೊವ್-ಡಿ ಲಸಿಕೆಯ ಕುರಿತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಸಮಿತಿಯು ಸೂಚಿಸಿದೆ. ಜುಲೈ 1ರಂದು ಅಹಮದಾಬಾದ್ ನ ಔಷಧ ತಯಾರಿಕಾ ಸಂಸ್ಥೆಯಾದ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಝಿಕೊವ್-ಡಿ ಲಸಿಕೆಯ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಲಸಿಕೆ 12ರಿಂದ 18 ವರ್ಷದೊಳಗಿನ ಮಕ್ಕಳಿಗೂ ಅತ್ಯಂತ ಸುರಕ್ಷಿತವಾಗಿದೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ ಈಗಾಗಲೇ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ, ಮಾಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳ ಬಳಕೆಗೆ ಅನುಮತಿ ಸಿಕ್ಕಿದೆ. ಇದರ ಜೊತೆಗೆ ಝಿಕೊವ್-ಡಿ ಮೂರು ಡೋಸ್ ಲಸಿಕೆಯ ತುರ್ತು ಬಳಕೆಗೂ ಅನುಮತಿ ಸಿಗುವ ಮೂಲಕ ಭಾರತದಲ್ಲಿರುವ ಕೊವಿಡ್ ಲಸಿಕೆಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

Edited By : Nirmala Aralikatti
PublicNext

PublicNext

20/08/2021 08:04 pm

Cinque Terre

75.97 K

Cinque Terre

2

ಸಂಬಂಧಿತ ಸುದ್ದಿ