ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ವಿಶ್ವ ಶ್ವಾಸಕೋಶ ದಿನ ಕೊರೊನಾ ಕಾಳಜಿಗೆ ಈ ಮಾಹಿತಿ ಓದಿ ನೋಡಿರಣ್ಣ

ಇಂದಿನ ದಿನಕ್ಕೆ ಒಂದು ವಿಶೇಷತೆ ಅದರಲ್ಲೂ ಈ ವರ್ಷವಂತೂ ಈ ದಿನಕ್ಕೆ ಎಲ್ಲಿಲ್ಲದ ವಿಶೇಷ ಬಂದು ಒದಗಿರುವುದಂತು ಸತ್ಯ‌ ಕಾರಣ ಈ ಕೋವಿಡ್ ಕೊರೊನಾ ವೈರಸ್ ಹಾವಳಿ ನೋಡಿ. ಈಗ ನೀವು ಸಾರಾಂಶ ಓದುತ್ತಾ ಸರಾಗವಾಗಿ ಉಸಿರಾಟ ಪ್ರಕ್ರಿಯೆ ನಡೆಸುತ್ತಿದ್ದಿರಲ್ಲಾ ಅಂತಹ ಉಸಿರಾಟಕ್ಕೆ ಕಾರಣವಾದ ಶ್ವಾಸಕೋಶದ ದಿನ ಇಂದು.

ಹೌದು ! ಪ್ರತಿ ವರ್ಷವು ಸಪ್ಟೇಂಬರ್ 25 ಕ್ಕೆ ಆಚರಿಸಲ್ಪಡುವ ಶ್ವಾಸಕೋಶದ ದಿನದ ಬಗ್ಗೆ ನಮಗೆ ಜಾಗೃತೆ ತೀರಾ ಕಡಿಮೆ ಈ ವರ್ಷ ಅಂತಹ ಅಜಾಗೃತೆಗೆ ಮಾಯವಾಗಿ ಶ್ವಾಸಕೋಶದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಸಂಗತಿಯ ಕಾರಣ ನಿಮಗೆಲ್ಲಾ ಗೊತ್ತೇ ಇದೆ. ಈ ಕೊರೊನಾ ವೈರಸ್ ಮುಖ್ಯವಾಗಿ ಲಗ್ಗೆ ಇಡೋದೆ ಶ್ವಾಸಕೋಶಕ್ಕೆ ಹೀಗಾಗಿ ಶ್ವಾಸಕೋಶದ ಕಾಳಜಿ ಬಗ್ಗೆ ನಿಮಗೊಂದಿಷ್ಟು ಟಿಪ್ಸ್ ಇಲ್ಲಿದೆ.

ಮಾನವನ ದೇಹದಲ್ಲಿರುವ ಐದು ಪ್ರಮುಖ ಅಂಗಾಂಗಳಲ್ಲಿ ಒಂದಾದ ಶ್ವಾಸಕೋಶ ದೇಹದ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಸ್ಥಾನ ಪಡೆದಿದ್ದು ದೇಹದ ಆಮ್ಲಜನಕ ಪೂರೈಕೆ ಮಾಡಿ ಇಂಗಾಲದ ಡೈ ಆಕ್ಸೈಡ್ ಹೊರಹಾಕಿ ಶುದ್ಧ ಆಮ್ಲಜನಕವನ್ನು ದೇಹದ ಎಲ್ಲ ಜೀವಕೋಶಗಳಿಗೆ ಪೂರೈಸಿ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಿ ಆರೋಗ್ಯ ರಕ್ಷಿಸುತ್ತದೆ ಈ ಶ್ವಾಸಕೋಶದ ಕಾಳಜಿಗೆ ನಾವೇನು ಮಾಡ್ಬೇಕು ಓದಿ ನೋಡಿ.

* ಧೂಮಪಾನ, ಮದ್ಯಪಾನದಂತಹ ವ್ಯಸನಗಳಿಂದ ದೂರವಿರಿ.

* ಶುದ್ಧ ಗಾಳಿಯನ್ನು ಸೇವಿಸಿ, ಅನೈರ್ಮಲ್ಯ ವಾತಾವರಣದಿಂದ ದೂರವಿರಿ.

* ಗಿಡ, ಮರ ಪ್ರಕೃತಿ ಜೊತೆ ಕಾಲ ಕಳೆಯಿರಿ ಮರಗಿಡಗಳನ್ನು ಪೋಷಿಸಿ.

* ಆಗಾಗ ಕೈ ತೊಳೆದು ಧೂಳು ಪ್ರದೇಶದ ಜೊತೆ ಹೊರಗಡೆ ಸಂಚರಿಸುವಾಗ ಮುಖಗವಸು ಧರಿಸಿರಿ.

* ಈಗಾಗಲೇ ನಿಮಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿದ್ದರೆ ವೈದ್ಯರ ಸಲಹೆ ಪಡೆಯಿರಿ.

* ನಿತ್ಯವು ಯೋಗ ಆಟೋಟಗಳಲ್ಲಿ ಪಾಲ್ಗೊಂಡು ದೇಹಕ್ಕೆ ಶ್ರಮ ನೀಡಿ ಮಿತವಾದ ಪೌಷ್ಟಿಕ ಆಹಾರ ಸೇವಿಸಿ.

* ಸಾಧ್ಯವಾದಲ್ಲಿ ದಿನವು ಧ್ಯಾನ ಮಾಡಿ ಧ್ಯಾನದ ಸಮಯ ಹಲವು ಯೋಚನೆ ಕೈ ಬಿಡಿ ಉಸಿರಿನ ಮೇಲೆ ನಿಗಾ ಇಡಿ.

* ವಾಹನ ಹೊಗೆ, ಕಾರ್ಖಾನೆ ಕೆಲಸಗಾರರು ಪೇಶ್ ಶೀಲ್ಡ್ ಮಾಸ್ಕ್ ಸೇರಿದಂತೆ ಗಾಳಿಯನ್ನು ಶುಧ್ಧಿಕರಿಸುವ ಇತರ ಸಾಧನ ಬಳಸಿರಿ.

* ಅತೀ ತಂಪಾದ ವಾತಾವರಣ ಹಾಗೂ ಮಳೆಯ ನೆನೆಯುವಿಕೆಯಿಂದ ದೂರವಿರಿ.

* ವಿವಿಧ ಹೆಸರೇ ತಿಳಿಯದ ಪರಪ್ಯೂಮ್ ಸೇರಿದಂತೆ ಪೌಡರಗಳ ವಾಸನೆಯಿಂದ ದೂರವಿರಿ.

* ಕೈಗಳಿಂದ ಮುಖ, ಮೂಗು ಮುಟ್ಟಿಕೊಳ್ಳುವಾಗ ಸ್ಯಾನಿಟೈಜರ್ ಬಳಸಿರಿ.

* ಕ್ರಿಮಿಗಳ ಜಾಷಧಿ ಹಾಗೂ ಲಿಕ್ವೀಡ್ ಬಳಕೆ ಮಾಡಿ ಆದಷ್ಟು ಸ್ವಚ್ಚತೆ ಕಾಪಾಡಿ.

Edited By :
PublicNext

PublicNext

25/09/2020 02:24 pm

Cinque Terre

66.98 K

Cinque Terre

0