ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೆ.ಎಸ್.ಆರ್.ಪಿ., ಎಡಿಜಿಪಿ ಆಗಿರುವ ಅಲೋಕ್ ಕುಮಾರ್ ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಸೋಂಕನ್ನು ನಾನು ಸಕಾರಾತ್ಮಕವಾಗಿ ಕಾಣುತ್ತೇನೆ. ಜೀವನ ಏನೂ ಅಲ್ಲ, ಅನುಭವಗಳ ಆಗರ.

"ನನ್ನ ಚಿಕಿತ್ಸೆ ನಡೆಯುತ್ತಿದ್ದು ಇಂತಹಾ ಸಂದರ್ಭದಲ್ಲಿಯೂ ನನ್ನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುತ್ತಿರುವ ನನ್ನ ಕುಟುಂಬದವರಿಗೆ ನಾನು ಆಭಾರಿ. ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಎಲ್ಲರಿಗೆ ವಂದನೆಗಳು" ಎಂದು ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

10/12/2020 07:51 pm

Cinque Terre

128.06 K

Cinque Terre

4