ಬೆಂಗಳೂರು : ಕರ್ನಾಟಕದಲ್ಲಿ 998 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,94,004ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 1601 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು ಗುಣಮುಖರಾದವರು 8,57,351.
ಇನ್ನು ಮಹಾಮಾರಿ ಕೈಯಲ್ಲಿ ನಲುಗಿದ 11 ಜನ ಸಾವನಪ್ಪುವ ಮೂಲಕ ಇದುವರೆಗೂ11,867 ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು 501 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,74,525ಕ್ಕೆ ಏರಿಕೆಯಾಗಿದೆ.
ಇನ್ನು ಸೋಂಕಿಗೆ 7 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟಾರೆ 4,190 ಮಂದಿ ಬಲಿಯಾಗಿದ್ದಾರೆ.
PublicNext
07/12/2020 07:31 pm