ಫಿಟ್ ನೆಸ್ ಪ್ರಿಯರು ಬರಿಗಾಲಲ್ಲಿ ವ್ಯಾಯಾಮ ಮಾಡಿದರೆ ಪಾದಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ.
ಮಣ್ಣು, ಮರಳು, ಹುಲ್ಲು ಅಥವಾ ಕುಶನ್ ಇರುವ ಯೋಗ ಮ್ಯಾಟ್ ಮೇಲೆ ವ್ಯಾಯಾಮ ಮಾಡುವುದರಿಂದ ಪಾದದ ಸ್ನಾಯುಗಳು ಬಲಗೊಳ್ಳುತ್ತವೆ.
ಕಣಕಾಲಿನ ಸಂಧಿ ಹೆಚ್ಚು ಗಟ್ಟಿಮುಟ್ಟಾಗುತ್ತದೆ. ಅದನ್ನು ತಿರುಗಿಸುವಾಗ ಯಾವುದೇ ನೋವಿನ ಅನುಭವ ನಿಮಗಾಗುವುದಿಲ್ಲ.
ಆದರೆ ಲಘು ವ್ಯಾಯಾಮವನ್ನು ಮಾತ್ರ ಬರಿಗಾಲಲ್ಲಿ ಮಾಡಬಹುದು.
ಶೂ ಧರಿಸುವುದರಿಂದ ಆಗುವ ಪ್ರಯೋಜನವೆಂದರೆ ನಮ್ಮ ಪಾದಗಳಿಗೆ ಚೂಪಾದ ವಸ್ತುಗಳು ಚುಚ್ಚುವುದರಿಂದ ರಕ್ಷಣೆ ಪಡೆಯಬಹುದು.
ಹಾಗೆಯೇ ಹೆಚ್ಚು ಬಾರಿ ಜಿಗಿಯುವಂತಹ ಕಠಿಣ ವ್ಯಾಯಾಮಕ್ಕೂ ಮೆತ್ತನೆಯ ಕುಷನ್ ಇರುವ ಶೂ ಅಥವಾ ಸ್ನೀಕರ್ ಧರಿಸುವುದು ಒಳ್ಳೆಯದು.
PublicNext
12/11/2020 06:47 pm