ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೇಪರ್ ಕಪ್ ಬಳಕೆ ಆರೋಗ್ಯಕ್ಕೆ ಸೂಕ್ತವೇ?

ನವದೆಹಲಿ : ಡೆಡ್ಲಿ ಸೋಂಕು ಕೊರೊನಾ ಬಂದ ಮೇಲೆ ಜನ ಒಬ್ಬರು ಬಳಸಿದ ವಸ್ತುಗಳನ್ನು ಮರು ಬಳಸಲು ವಿಚಾರ ಮಾಡುತ್ತಿದ್ದಾರೆ.

ಅದರಲ್ಲೂ ಹೊಟೇಲ್ ಗಳಲ್ಲಿ ಕಾಫಿ, ಚಹಾ ಸೇವಿಸಲು ಪೇಪರ್ ಕಪ್ ಗೆ ಮಾರು ಹೋಗಿದ್ದಾರೆ.

ಆದ್ರೆ ಈ ಕಪ್ ಬಳಕೆಯಿಂದಾಗುವ ಅನಾನುಕೂಲತೆಯ ಬಗ್ಗೆ ಒಮ್ಮೆ ಯೋಚಿಸಿದ್ರೆ ನೀವು ಈ ಕಪ್ ಬಳಕೆಯನ್ನೇ ನಿಲ್ಲಿಸಿದರು ಅಚ್ಚರಿ ಇಲ್ಲ.

ಅಷ್ಟಕ್ಕೂ ಈ ಕಪ್ ಆರೋಗ್ಯಕ್ಕೆ ಮಾರಕವಾಗಿವೆ ಎಂಬುದು ಈಗ ಬೆಳಕಿಗೆ ಬಂದಿದೆ.

ಒಬ್ಬ ವ್ಯಕ್ತಿ ದಿನಕ್ಕೆ ಮೂರು ಬಾರಿ ಪೇಪರ್ ಗ್ಲಾಸ್ ನಲ್ಲಿ ಟೀ ಸೇವಿಸಿದರೆ ಆತನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಮೂರು ಕಪ್ ಪೇಪರ್ ಗ್ಲಾಸ್ ನಲ್ಲಿ ಚಹಾ ಸೇವಿಸಿದರೆ 75 ಸಾವಿರ ಟಿನಿ ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹ ಸೇರಲಿವೆಯಂತೆ.

ಪೇಪರ್ ಗ್ಲಾಸ್ ಗಳಲ್ಲಿ ಬಿಸಿ ಪಾನೀಯಗಳನ್ನು ಹಾಕಿದರೆ ಗ್ಲಾಸ್ ತಯಾರಿಕೆಗೆ ಬಳಸುವ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪಾನೀಯಗಳಿಗೆ ಸೇರಿ ಅದನ್ನು ಸೇವಿಸುವ ವ್ಯಕ್ತಿಗಳ ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರಲಿವೆ ಎಂದು ಸ್ಪಷ್ಟಪಡಿಸಿದೆ.

Edited By : Nirmala Aralikatti
PublicNext

PublicNext

09/11/2020 06:43 pm

Cinque Terre

68.44 K

Cinque Terre

0

ಸಂಬಂಧಿತ ಸುದ್ದಿ