ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಲಸಿಕೆ ಫೆಬ್ರುವರಿಯಲ್ಲಿ ಲಭ್ಯ ಸಾಧ್ಯತೆ

ಕೊರೊನಾ ಎಂಬ ಭೀಕರ ಮಹಾಮಾರಿ ಇಡೀ ಪ್ರಪಂಚದ ಮಾನವಕುಲವನ್ನೇ ಕಂಗಾಲಾಗಿಸಿದೆ.‌ ಈ ನಡುವೆ ಅದಕ್ಕೆ ಔಷಧಿ ಕಂಡುಹಿಡಿಯುಗ ನಿರಂತರ ಕಸರತ್ತು ನಡೆದೇ ಇತ್ತು. ಲಸಿಕೆಗಳು ಕೂಡ ತಯಾರಾಗುತ್ತಿವೆ‌. ಈ ನಡುವೆ ಲಸಿಕೆಗಳು ಫೆಬ್ರುವರಿ ತಿಂಗಳಲ್ಲಿ ಬಿಡುಗಡೆಯಾಗಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಆಯೋಗ ಹೇಳಿದೆ. ಎಲ್ಲರಿಗೂ ಸಕಾರಣದ ದರದಲ್ಲಿ ಈ ಲಸಿಕೆ ಸಿಗುತ್ತಾ ಅನ್ನೋದೇ ಇನ್ಮುಂದಿನ ಪ್ರಶ್ನೆಯಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಆಯೋಗ ಹಾಗೂ ಬಯೋಟೆಕ್ ಕಂಪನಿ ಜಂಟಿಯಾಗಿ ಕೊರೊನಾ ಔಷಧಿ ಕೊವ್ಯಾಕ್ಸಿನ್ ಅನ್ನು ತಯಾರಿಸುತ್ತಿದೆ. ಉಳಿದಂತೆ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಕೊವಿಶೀಲ್ಡ್ ಲಸಿಕೆ ತಯಾರಾಗುತ್ತಿದೆ‌. ಮೊದಲ ಹಂತದಲ್ಲಿ ಭಾರತದಲ್ಲಿ ಅಂದಾಜು 30 ಕೋಟಿ ಜನರಿಗೆ ಈ ಲಸಿಕೆ ಲಭಿಸಲಿದೆ.

50 ವರ್ಷ ಮೇಲ್ಪಟ್ಟವರಿಗೆ 26 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಸಿಗಲಿದೆ‌. ನಂತರ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಸಶಸ್ತ್ರ ಪಡೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಒಂದು ಕೋಟಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ಸಿಗಲಿದೆ‌.

Edited By : Nagaraj Tulugeri
PublicNext

PublicNext

09/11/2020 07:31 am

Cinque Terre

43.19 K

Cinque Terre

2