ನವದೆಹಲಿ: ಕೇಂದ್ರದ ಜವಳಿ ಸಚಿವೆಯಾಗಿರುವ ಸ್ಮೃತಿ ಇರಾನಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಟ್ವೀಟ್ ಮೂಲಕ ಅವರು, 'ನನಗೆ ಕೋವಿಡ್ ಇರುವುದು ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು' ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ, ನಿತೀನ್ ಗಡ್ಕರಿ, ದರ್ಮೇಂದ್ರ ಪ್ರಧಾನ್ ಅವರಿಗೆ ಈ ಹಿಂದೆ ಕೋವಿಡ್ ಇರುವುದು ದೃಢಪಟ್ಟಿತ್ತು.
ದೇಶದಾದ್ಯಂತ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 79,90,322 ತಲುಪಿದ್ದು, ಸೋಂಕಿನಿಂದ ಈವರೆಗೂ 1,20,010 ಮಂದಿ ಸಾವಿಗೀಡಾಗಿದ್ದಾರೆ.
PublicNext
29/10/2020 07:58 am