ಕೊಚ್ಚಿ : ಮಾಸ್ಕ್ ಬಳಕೆ ಇತ್ತೀಚೆಗೆ ಜೀವನದ ಭಾಗವಾಗಿ ಹೋಗಿದೆ. ಕೊರೊನಾ ತಡೆಯುವಲ್ಲಿ ಮಾಸ್ಕ್ ಅಗತ್ಯ ಎಂದು ತಜ್ಞರು ಸಹ ತಿಳಿಸಿದ್ದಾರೆ.
ಹೆಚ್ಚು ಕಾಲ ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತದೆ ಎಂದು ಎಚ್ಚರಿಸಿದ್ದಾರೆ.
ದೀರ್ಘ ಕಾಲ ಮಾಸ್ಕ್ ಬಳಸುವುದರಿಂದ ದುರ್ವಾಸನೆಯುಂಟಾಗುತ್ತದೆ, ಬಾಯಿ ಒಣಗುತ್ತದೆ, ತಲೆ ನೋವಿನ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಬಳಕೆದಾರರು ಸ್ವಲ್ಪ ಕಾಳಜಿ ವಹಿಸಿದರೆ ಈ ಸಮಸ್ಯೆಗಳು ಬೇಗ ಕಾಡುವುದಿಲ್ಲ ಎಂದಿದ್ದಾರೆ.
ಫೇಸ್ ಮಾಸ್ಕ್ ಗಳನ್ನು 8-10 ಗಂಟೆಗಳ ಕಾಲ ಧರಿಸುವ ಅನೇಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರಿದ್ದಾರೆ.
ಈ ಸಮಸ್ಯೆಗಳನ್ನು ‘ಮಾಸ್ಕ್ ಮೌತ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ.
ಸಾರ್ವಜನಿಕರಲ್ಲಿ ಶೇ.20ಕ್ಕೂ ಹೆಚ್ಚು ಜನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದಂತ ವೈದ್ಯರು ಹೇಳಿದ್ದಾರೆ.
ಸಮಸ್ಯೆಗೆ ಪರಿಹಾರವೇನು?
ದೈನಂದಿನ ಆಹಾರ ಕ್ರಮದಲ್ಲಿ ಸಂಸ್ಕರಿಸಿದ ಆಹಾರಕ್ಕಿಂತ ಹೈಡ್ರೆಟೆಡ್ ಹಾಗೂ ಫೈಬರ್ಯುಕ್ತ ಆಹಾರ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ.
ಅಲ್ಲದೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು ಒಂದು ಗಂಟೆಗೊಮ್ಮೆ ಮಾಸ್ಕ್ ತೆಗೆದು 5 ನಿಮಿಷಗಳ ವಿರಾಮ ತೆಗೆದುಕೊಳ್ಳಬಹುದು.
ಒಬ್ಬರೇ ಇದ್ದಾಗ ಮಾತ್ರ ಈ ರೀತಿ ಮಾಡಬೇಕು ಎಂದು ಡಾ. ಸಲಹೆ ನೀಡಿದ್ದಾರೆ.
PublicNext
09/10/2020 10:12 pm