ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿಂದು 6974 ಜನರಿಗೆ ಕೊರೊನಾ- ಬೆಂಗ್ಳೂರಿನಲ್ಲಿ 2 ಲಕ್ಷ ದಾಟಿದ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು 6974 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, 83 ಜನ ಬಲಿಯಾಗಿದ್ದಾರೆ.

ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5,33,850ಕ್ಕೆ ಏರಿಕೆಯಾದರೆ, ಇಲ್ಲಿವರೆಗೂ ಹೆಮ್ಮಾರಿಗೆ 8,228 ಮಂದಿ ಕೊರೊನಾಗೆ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು 9,073 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ಈವರೆಗೆ 4,32,450 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 93,153 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇದರಲ್ಲಿ 822 ಜನರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಕೋವಿಡ್-19 ಹಾಟ್‌ಸ್ಪಾಟ್ ಆಗಿರುವ ಬೆಂಗಳೂರಿನಲ್ಲೇ ಇಂದು ಹೊಸದಾಗಿ 3,082 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷ ದ ಗಡಿ ದಾಟಿದೆ. ಒಟ್ಟಾರೆ 1,58,029 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು 26 ಜನರು ಮೃತಪಟ್ಟಿದ್ದು, ಈವರೆಗೂ 2,715 ಮಂದಿ ಸಾವಿಗೀಡಾಗಿದ್ದಾರೆ.

Edited By : Vijay Kumar
PublicNext

PublicNext

22/09/2020 09:36 pm

Cinque Terre

115.69 K

Cinque Terre

2