ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪ್ರಧಾನಿ‌ ನರೇಂದ್ರ ಮೋದಿ ಜನ್ಮದಿನ: ಗದಗನಲ್ಲಿ ಹಲವು ಕಾರ್ಯಕ್ರಮ

ಗದಗ: ದೇಶದ ಪ್ರದಾನಿ ನರೇಂದ್ರ ಮೋದಿ, ದೀನದಯಾಳ ಉಪಾಧ್ಯಾಯ, ಮಹಾತ್ಮಾಗಾಂಧಿ ಹಾಗೂ ಲಾಲಬಹೂದ್ದೂರ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಇದೇ ಸೆಪ್ಟಂಬರ 17ರಿಂದ ಅಕ್ಟೋಬರ ೦೨ ವರೆಗೆ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಿ.ಸಿ. ರೇಶ್ಮಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾ ಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸೆ.17 ರಂದು ಪ್ರಧಾನಿ ಮೋದಿಯವರ ಜನ್ಮದಿನ,ಸೆ. ೨೫ ರಂದು ದೀನದಯಾಳ ಉಪಾಧ್ಯಾಯರವರ, ಹಾಗೂ ಅಕ್ಟೋಬರ್ ೦೨ ರಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನಾದ ಅಂಗವಾಗಿ ಕಾರ್ಯಕರ್ತರನ್ನು ಸಂಘಟನೆಗೆ ಮಾತ್ರವಲ್ಲದೆ,ಸಾಮಾಜಿಕ ಸೇವೆಯಲ್ಲಿ ತೊಡಗಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಡತನ ನಿರ್ಮೂಲನೆ ಪಕ್ಷದ ಉದ್ದೇಶವಾಗಿರುವದರಿಂದ ಮಂಡಲಗಳಿಂದ ಬೂತ್ ಮಟ್ಟದ ವರೆಗೆ ಸೇವೆಯನ್ನು ವಿಸ್ತರಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸೆ.17 ರಂದು ಯುವ ಮೋರ್ಚಾದಿಂದ ರಕ್ತದಾನ ಶಿಬಿರ, ಕೃತಕ ಅಂಗಾಗ ಜೋಡನೆ,ಕೆರೆ,ಬಾವಿ ಸ್ವಚ್ಚತಾ ಕಾರ್ಯ, ಸಸಿಗಳನ್ನು ನೆಡುವುದು, ಮೋದಿಯವರ ಜೀವನ ಚರಿತ್ರೆ,ಹೋರಾಟದ ಬದುಕಿನ ಕುರಿತು ಭೌತಿಕ ಸಭೆ,ಸ್ವದೇಸಿ ವಸ್ತುಗಳನ್ನು ಪ್ರೋತ್ಸಾಹಿಸಲು ಗುಡಿ ಕೈಗಾರಿಕೆಗೆ ಪ್ರೇರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿ.ಸಿ.ರೇಶ್ಮಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ವಿನಾಯಕ ಹಬೀಬ ಸೇರಿದಂತೆ ಮುಂತಾದವರು ಇದ್ದರು.

Edited By :
PublicNext

PublicNext

15/09/2022 09:37 pm

Cinque Terre

45.09 K

Cinque Terre

2