ಗದಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಹಿನ್ನೆಲೆಯಲ್ಲಿ ಡಿಸೆಂಬರ್ 10ರಂದು ಬೆಳಗಾವಿ ಸುವರ್ಣ ಸೌಧಕ್ಕೆ
ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕುತ್ತೇವೆ ಎಂದು ಶಾಸಕ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಗದಗ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ್, ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹೋರಾಟ ತಡೆಯಲು ಪ್ರಯತ್ನ ಮಾಡ್ತಾಯಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಸಮಾಜದ ಮೇಲೆ ಏಕೆ ಕೋಪ? ಸಿಎಂ ಅವರಿಗೆ ಮನವಿ ಮಾಡುತ್ತೇನೆ... ಹೋರಾಟ ತಡೆಯುವ ಪ್ರಯತ್ನ ಮಾಡಬೇಡಿ. ನಮ್ಮ ಸಮಾಜದ ಮುಖಂಡರಿಗೆ ಪೊಲೀಸರು ಪೋನ್ ಮಾಡಿ, ಹೇಳ್ತಾಯಿದ್ದಾರೆ.
ಹೋರಾಟವನ್ನು ಹತ್ತಿಕ್ಕಲು ಅಧಿಕಾರಿಗಳನ್ನು ಬಳಕೆ ಮಾಡ್ತಾಯಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದ್ರು. ಈವಾಗ ಆಗೀನ ಕಾಂಗ್ರೆಸ್ ಶಾಸಕರು, ಈಗಿನ ಕಾಂಗ್ರೆಸ್ ಶಾಸಕರು ಚಕಾರ ಎತ್ತುತ್ತಿಲ್ಲ! ಕೆಲವು ಶಾಸಕರು ಆಗ ಹೋರಾಟ ಮಾಡಿದ್ರು, ಈ ಮೌನ ವಹಿಸಿದ್ದಾರೆ. ಆದರೆ, ಯಾವ ಕಾರಣಕ್ಕೂ ಹೋರಾಟ ನಿಲ್ಲೋದಿಲ್ಲ, ತಡೆಯುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
PublicNext
08/12/2024 07:45 pm