ಗದಗ: ನಿವೃತ್ತ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.30 ರಂದು ಸಾರಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ನಿವೃತ್ತ ನೌಕರರ ಮುಖಂಡ ಹನುಮಂತಪ್ಪ ದೊಡ್ಡಮನಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, 2016ರ ಅಗ್ರಿಮೆಂಟ್ ಅರಿಯರ್ಸ್ ರಜೆ ನಗದೀಕರಣದ 4 ಬಿಲ್ ಬಾಕಿ, 2016ರ ಪರೀಷ್ಕರಣೆ ವೇತನದ ಮೂರು ತಿಂಗಳ ಬಾಕಿ ಹಿಂದಿನ ಬಿ.ಡಿ.ಎ 2 % ಮತ್ತು 1.75 % ಬಾಕಿ, ಹಿಂದಿನ ರೇನ್ ಕೋಟ್ ಶೂ ಬಿಲ್ ಬಾಕಿ ಹಣವನ್ನು ನೀಡಬೇಕು ಎಂದು ಎಲ್ಲ ಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.ಅತಿಯಾದ ಬೆಲೆ ಏರಿಕೆಯ ನಡುವೆ ಅತಿ ಕಡಿಮೆ ಪಿಂಚಣಿಯಿಂದ ಕುಟುಂಬದ ನಿರ್ವಹಣಿ ನಡೆಸುವುದು ಬಹಳ ಕಷ್ಟವಾಗಿದೆ.
ಹೀಗಾಗಿ ಸೆ.30ರ ಒಳಗಾಗಿ ನಿವೃತ್ತ ನೌಕರರ ಹಿಂದಿನ ಎಲ್ಲಾ ಬಾಕಿ ಹಣ ಕೊಡಬೇಕು.ಕೊಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ವಾ.ಕ.ರ.ಸಾ ಸಂಸ್ಥೆಯ ವಿಭಾಗಿಯ ಕಚೇರಿ ಗದಗ ಮುಂದೆ ನಿವೃತ್ತ ನೌಕರರು ಅರೆಬೆತ್ತಲೆ ಪ್ರತಿಭಟನೆಗೆ ಮುಂದಾಗುವ ಅನಿವಾರ್ಯತೆ ಇದೆ.ಕೂಡಲೇ ನಮ್ಮ ರಾಜ್ಯ ಸರ್ಕಾರ ಕಳೆದ 6 ವರ್ಷಗಳ ಕಾರ್ಮಿಕರ ಹಿಂದಿನ ಬಾಕಿ ಹಣ ಕೊಟ್ಟು ,ನಮ್ಮೊಂದಿಗೆ ಸಹಕರಿಸಲು ಈ ಮೂಲಕ ವಿನಂತಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಟಿ.ಬಿ ಹೆಗರಿ, ಬಿ ಎಚ್ ಭಜಂತ್ರಿ, ಎಂ.ಎಂ ದೊಡ್ಮನಿ,ಎಂ ಕೆ ಕರ್ನಾಚಿ,ಎಸ್ ಕೆ ರಾಯಬಾಗಿ,ಕೆ ವಿ ಹಂಚಿನಾಳ ಮತ್ತ ಇತರರು ಇದ್ದರು.
PublicNext
15/09/2022 07:58 pm