ಗದಗ: ಕರ್ತವ್ಯ ಮುಗಿಸಿ ವಾಪಾಸ್ ಬರುವಾಗ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದ ಮುಂಡರಗಿ ಪೊಲೀಸ್ ಠಾಣೆಯ ಮಹೇಶ್ ಹಾಗೂ ನಿಂಗಪ್ಪ ಎಂಬ ಪೊಲೀಸ್ ಕಾನ್ಸಸ್ಟೇಬಲ್ ಕುಟುಂಬಗಳಿಗೆ ತಲಾ 50 ಲಕ್ಷದ ವರೆಗೆ ಪರಿಹಾರ ಸಿಗಲಿದೆ ಅಂತಾ ಗದಗ ಉಸ್ತುವಾರಿ ಸಚಿವ ಬಿಸಿ ಪಾಟೀಲ ಹೇಳಿದ್ರು.
ಅತಿವೃಷ್ಟಿ ಪರಿಸ್ಥಿತಿ ವಿಷಯವಾಗಿ ಗದಗ ನಗರದ ಪರಿವೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತ್ರ ಮಾತ್ನಾಡಿದ ಸಚಿವರು, ಪೊಲೀಸರ ಕುಟುಂಬಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಎಸ್ ಡಿಆರ್ ಎಫ್ ಅಡಿ ಜಿಲ್ಲಾಧಿಕಾರಿಗಳು 5 ಲಕ್ಷ ರೂಪಾಯಿ ಪರಿಹಾರವನ್ನ ನೀಡಲಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ 50 ಲಕ್ಷ ರೂಪಾಯಿ ವರೆಗೂ ಪರಿಹಾರ ಬರುತ್ತದೆ. ಹೆಚ್ಚಿನ ಪರಿಹರಾರ ದೊರಕಿಸಲು ಸಾಧ್ಯವಾ ಅನ್ನೊ ಬಗ್ಗೆಯೂ ಚರ್ಚೆ ನಡೆಸ್ತೇನೆ ಅಂದ್ರು.
ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ ಶಿವಪ್ರಕಾಶ್ ದೇವರಾಜು, ಗ್ರೂಪ್ ಇನ್ಸುರೆನ್ಸ್ ಸೇರಿದಂತೆ ಪೊಲೀಸ್ ಇಲಾಖೆ ವತಿಯಿಂದ 50 ಲಕ್ಷ ರೂಪಾಯಿಗೂ ಹೆಚ್ಚು ಹಣ ಬರಲಿದೆ. ಕುಟುಂಬದೊಂದಿಗೆ ಇಲಾಖೆ ಇದೆ ಕುಟುಂಬಗಳಿಗೆ ಸಹಾಯ ಸಹಕಾರ ನೀಡುತ್ತೇವೆ ಅಂತಾ ತಿಳಿಸಿದ್ರು.
ಸೆಪ್ಟೆಂಬರ್5 ನೇ ತಾರೀಕು ಮುಂಡರಗಿ ಪೊಲೀಸ್ ಠಾಣೆಯ ದೇಪೆಗಳಾದ ಮಹೇಶ್, ನಿಂಗಪ್ಪ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ವ್ಯಾಪ್ತಿಯ ಹಳ್ಳದಲ್ಲಿ ನಾಪತ್ತೆಯಾಗಿದ್ರು. ಹುಡುಕಾಟ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿಗೆ ದಿನಾಂಕ ಸೆಪ್ಟೆಂಬರ್6 ರಂದು ಮೃತ ದೇಹ ಸಿಕ್ಕಿದ್ವು.
Kshetra Samachara
11/09/2022 09:50 pm