ಗದಗ: ಗದಗ ತಾಲೂಕಿನ ಅಂತೂರ ಬೆಂತೂರ ಹೊರ ವಲಯದಲ್ಲಿ ನೆರೆ ಪ್ರದೇಶ ವೀಕ್ಷಣೆ ಮಾಡಲು ಬಂದಿದ ಸಚಿವ ಬಿಸಿ ಪಾಟೀಲರಿಗೆ ಅಂತೂರ ಬೆಂತೂರ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಜರುಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಜಖಂ ಆಗಿದ್ದರಿಂದ ಬ್ರಿಡ್ಜ್ ಪರಿಶೀಲಿಸುವಂತೆ ಸಚಿವರಿಗೆ ಘೇರಾವ ಹಾಕಿ ಗ್ರಾಮಕ್ಕೆ ಕರೆದೊಯ್ದು ಶಾಸಕರು, ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಇಲ್ಲಿವರೆಗೂ ಭೇಟಿ ನೀಡಿಲ್ಲ ನೀವು ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ನಂತರ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಬ್ರಿಡ್ಜ್ ವೀಕ್ಷಿಸಿದ್ದಾರೆ.
PublicNext
11/09/2022 04:05 pm