ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪರಸಾಪುರ ಗ್ರಾಮಕ್ಕೆ ಬಸ್ ಕಲ್ಪಿಸುವಂತೆ ಆಗ್ರಹಿಸಿ ಶನಿವಾರ ವಿದ್ಯಾರ್ಥಿಗಳು ಸಾರಿಗೆ ತಡೆದು ರಸ್ತೆಗೆ ಮುಳ್ಳು ಬೇಲಿ ಹಾಕಿ ಪ್ರತಿಭಟನೆ ನಡೆಸಿದರು.
ಪರಸಾಪುರ ಗ್ರಾಮದ ಒಳಗೆ ಯಾವೊಂದು ಬಸ್‌ಗಳು ಬರುವುದಿಲ್ಲ. ಗ್ರಾಮಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಹೋರಾಟ ಮಾಡಿ ಮೌಖಿಕ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯದ ವೇಳೆ ತಹಶೀಲ್ದಾರ್ ಕಲಗೌಡ ಪಾಟೀಲ್ ಅವರ ಗಮನಕ್ಕೂ ತರಲಾಗಿದೆ. ಆದರೂ ಅಧಿಕಾರಿಗಳು ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ರಸ್ತೆಯ ಮೇಲೆ ಮುಳ್ಳಿನ ಕಂಟಿ ಹಾಕಿ ಪ್ರತಿಭಟನೆ ಮಾಡಿದರು.
ಕೇವಲ ಪರಸಾಪುರ ಕ್ರಾಸ್‌ವರೆಗೂ ಮಾತ್ರ ಓಡಾಡುತ್ತಿದ್ದು, ಪ್ರಾಯಾಣಿಕರು ಪರಸಾಪುರ ಕ್ರಾಸ್‌ನಿಂದ ಒಂದುವರಿ ಕಿ.ಮೀ. ನಡೆದುಕೊಂಡು ಗ್ರಾಮಕ್ಕೆ ಹೋಗಬೇಕು. ವಿದ್ಯಾರ್ಥಿಗಳು ಮಳೆಗಾಲದಲ್ಲಿ ಹಲವು ಬಾರಿ ನೆನದುಕೊಂಡು ಶಾಲೆಗೂ ಹೋಗಲಾಗದೇ ಮರಳಿ ಮನೆಗೆ ಬಂದ್ ಉದಾರಣೆ ಸಾಕಷ್ಟಿವೆ. ಮತ್ತು ರಾತ್ರಿ ವೇಳೆ ನಿರ್ಜನ ಪ್ರದೇಶವಾದ ಪರಸಾಪೂರ ಕ್ರಾಸ್‌ನಿಂದ ಗ್ರಾಮಕ್ಕೆ ಬರಬೇಕಾದರೆ ಗ್ರಾಮದ ರೋಗಿ ಗಳು ಮಕ್ಕಳು, ಹಿರಿಯರು ಹಾಗೂ ಬಾಣಂತಿಯರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಗ್ರಾಮದ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
PublicNext
25/09/2022 06:33 pm