ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೇಔಟ್‌ನಲ್ಲಿ ಮೂಲ ಸೌಕರ್ಯಗಳೇ ಇಲ್ಲ: ಜನರ ಪರದಾಟ: ಕಿಸಾನ್ ಜಾಗೃತಿ ಸಂಘಟನೆ

ಗದಗ:ಖಾಸಗಿ ನಿವೇಶನದ ಬಡಾವಣೆಗಳಲ್ಲಿ ಸೂಕ್ತವಾದ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡದೇ ನಿವೇಶನದ ಜಾಗೆಗಳನ್ನು ಜನತೆಗೆ ಮಾರಾಟ ಮಾಡಿದ ಖಾಸಗಿ ಮಾಲೀಕರ ಮೇಲೆ ಕ್ರಿಮಿನಲ್ ದಾವೆ ದಾಖಲು ಮಾಡಬೇಕು ಎಂದು ಕಿಸಾನ್ ಜಾಗೃತಿ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ವಿಶ್ವನಾಥ್ ತಾಮ್ರಗುಂಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮುಂಡರಗಿ ತಾಲೂಕ ಮುಂಡರಗಿ ಪಟ್ಟಣದ ಪುರಸಭೆ ಕಾರ್ಯಾಲಯ ರಾಜೀವ್ ಗಾಂಧಿ ವಸತಿ ನಿಗಮ,ಗದಗ ಯೋಜನಾ ಕೋಶ,ಗದಗ ಜಿಲ್ಲಾಧಿಕಾರಿ,ಕರ್ನಾಟಕ ಗೃಹ ಮಂಡಳಿ,ಮಾಲೀಕರು ಒಗ್ಗೂಡಿಕೊಂಡು ಮುಂಡರಗಿಯ ಖಾಸಗಿ ಲೇಔಟ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡದೇ ವಂಚನೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸರ್ಕಾರವು ಕೊಡ ಜನರನ್ನು ಮೋಸ ಮಾಡಲು ಭಾಗವಹಿಸಿದೆ ಎಂದರು.

ಮುಂಡರಗಿ ಪುರಸಭೆ ಕಾರ್ಯಾಲಯದ ಚುನಾಯಿತ ಆಡಳಿತ ಮಂಡಳಿಯು ಬಿಜೆಪಿ ಸರ್ಕಾರದ ಆಡಳಿತ ಮಂಡಳಿಯಿದ್ದು,ಇದು ಯಾವುದೇ ರೀತಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸದೇ ತನ್ನದೇ ಆದ ಛಾಪದಲ್ಲಿ ಕಾರ್ಯನಿರ್ವಹಿಸುತ್ತಿದೆ.ಆಡಳಿತ ಮಂಡಳಿಯ ಬಹು ಕೋಟಿ ಹಗರಣವನ್ನು ಮುಚ್ಚಿ ಹಾಕಲು,ಚುನಾಯಿತ ಆಡಳಿತ ಮಂಡಳಿಯನ್ನು ಚುನಾಯಿತ ಪ್ರತಿನಿಧಿಗಳು ವಿರೋಧಿಸಿ ಅವಿಸ್ವಾಸ ಗೊತ್ತುವಳಿ ಮಾಡಿದರೂ ಕೂಡಾ ಭ್ರಷ್ಟ ಶಾಸಕರು ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಂಡರಗಿ ಪುರಸಭೆ ಚುನಾಯಿತ ಆಡಳಿತ ಮಂಡಳಿಯ ಬಹುಮತ ಇಲ್ಲದ ಈ ಚುನಾಯಿತ ಆಡಳಿತ ಮಂಡಳಿಯನ್ನು ನ್ಯಾಯಾಲಯದಿಂದ ತನಿಖೆ ಮಾಡಿಸಿ ಇದನ್ನು ಕೂಡಲೇ 'ಸೂಪರ್ ಸೀಡ್' ಮಾಡಬೇಕು. ಇಲ್ಲವಾದರೆ ಇದೇ 28 ರಂದು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಮುಂಡರಗಿ ಪುರಸಭೆ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

Edited By : Nirmala Aralikatti
Kshetra Samachara

Kshetra Samachara

24/09/2022 10:31 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ