ಗದಗ: ಕಳೆದ ಹಲವು ದಿನಗಳ ಹಿಂದೆ ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ಜನರು ಮತ್ತೆ ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದ ತೋಟದ ಮನೆಗೆ ನುಗ್ಗಿ ಎರಡು ಹಸುಗಳನ್ನು ಬಲಿ ಪಡೆದಿದೆ ಎಂದು ರೈತ ಶರಣಪ್ಪ ಪಾಟೀಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ತೋಟದ ಮನೆಗೆ ನುಗ್ಗಿರುವ ಚಿರತೆ ಹೊರಗೆಳೆದು ತಂದು ತಿಂದು ಹಾಕಿದೆ ಎಂದು ರೈತ ಶರಣಪ್ಪ ಹೇಳಿದ್ದಾರೆ.
ಚಿರತೆ ನೋಡಿದ ಜನರು ಕೂಗಾಡಿದ್ದರಿಂದ ಚಿರತೆ ಓಡಿ ಹೋಗಿದೆ ಎಂದಿರುವ ರೈತರು ರಾತ್ರಿ ಹೊತ್ತು ವಿದ್ಯುತ್ ಇರದೇ ಇರುವುದರಿಂದ ಇಂತಹ ಅವಘಡ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
PublicNext
30/09/2022 12:52 pm