ಗದಗ: ಗದಗ ಜಿಲ್ಲೆ ರೋಣ ತಾಲ್ಲೂಕಿನ ಕೊತಬಾಳ ಗ್ರಾಮ ಪಂಚಾಯ್ತಿಯಲ್ಲಿ ಸೋಮವಾರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು.
ಹಿಂದೆ ಅಧ್ಯಕ್ಷರಾಗಿದ್ದ ಈರಣ್ಣ ಯಾಳಗಿ ಹಾಗೂ ಉಪಾಧ್ಯಕ್ಷೆ ಪಾರ್ವತೆವ್ವ ಬಿಸಾಟಿಯವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಕಾಳಿಂಗಪ್ಪ ಕಳಕಮಲ್ಲಪ್ಪ ಉಪ್ಪಾರ ಹಾಗೂ ಉಪಾಧ್ಯಕ್ಷೆ ಸ್ಥಾನವನ್ನು ಕಮಲವ್ವ ಕೋಡಿಕೊಪ್ಪದವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಿದ್ದಣ್ಣ ಯಾಳಗಿ, ಫಕೀರಪ್ಪ ಗುಳಗುಳಿ, ಭೀಮನಗೌಡ ಮುದಕನಗೌಡ ಉಸಲಕೊಪ್ಪದ, ಸಣ್ಣಪ್ಪ ಕಾಡದೆಲಿ, ರೇಣುಕಾ ಸಣ್ಣಪ್ಪ ದೊಡ್ಡಕಣಿ. ಶೇಕಪ್ಪ ಮಾಳವಾಡ, ಇನ್ನುಳಿದ ಸದಸ್ಯರು ಚುನಾವಣಾ ಅಧಿಕಾರಿಗಳು ಹಾಗೂ ಪಿಡಿಒ, ಪಂಚಾಯ್ತಿ ಸಿಬ್ಬಂದಿಗಳು ಇದ್ದರು.
Kshetra Samachara
26/09/2022 04:24 pm