ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಗ್ನಿಶಾಮಕ ಠಾಣೆ ಮೇಲೆ ಲೋಕಾಯುಕ್ತ‌ ದಾಳಿ: ಲಂಚ‌ ಪಡೆಯುವಾಗ ಸಿಕ್ಕಿಬಿದ್ದ‌ ಅಧಿಕಾರಿ

ಗದಗ: ಗದಗ ನಗರದ ಅಗ್ನಿ ಶಾಮಕ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಗದಗ ನಗರದ ಎಪಿಎಂಸಿ ಆವರಣದಲ್ಲಿರುವ ಅಗ್ನಿ ಶಾಮಕ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಲೆಯ ಪರವಾನಿಗೆ ನವೀಕರಣದ ನಿರಪೇಕ್ಷಣಾ ಪತ್ರ ನೀಡಲು 7ಸಾವಿರ ಲಂಚದ ಬೇಡಿಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲಮಠ ಶಾಲೆಗೆ ನವೀಕರಣದ ನಿರಪೇಕ್ಷಣಾ ಪತ್ರ ನೀಡಲು ಗದಗ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ನವೀನ ಕುಮಾರ ಕಗ್ಗಲಗೌಡ್ರ ಅವರು ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಏಳು ಸಾವಿರ ರೂಪಾಯಿ ಲಂಚವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಶಾಲೆಯ ಮುಖ್ಯೋಪಾಧ್ಯಾಯ ಸಿ.ಬಿ ಮೊಗಲಿ ಲೋಕಾಯುಕ್ತಕ್ಕೆ ದೂರು ನಿಡಿದ್ದರು.

ಲೋಕಾಯುಕ್ತ ಎಸ್ಪಿ ಸತೀಶ ಚಿಟ್ಟಿಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ, ಇನ್ಸ್ಪೆಕ್ಟರ್ ರವಿ ಪುರುಷೋತ್ತಮ ಹಾಗೂ ಆಜೀಜ್ ಕಾಲಾದಗಿ ನೇತೃತ್ವದಲ್ಲಿ ದಾಳಿ ನಡೆದಿದೆ.

Edited By : Somashekar
PublicNext

PublicNext

28/09/2022 07:53 pm

Cinque Terre

35.63 K

Cinque Terre

1

ಸಂಬಂಧಿತ ಸುದ್ದಿ