ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಫಲಾನುಭವಿಗಳಿಗೆ ಸೌಲಭ್ಯ‌ ವಿತರಣೆ, ಅಹವಾಲು ಆಲಿಕೆ

ಗದಗ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಒಂದು ಉಪಯುಕ್ತ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ತಮ್ಮ ಅಹವಾಲುಹಳನ್ನು ಸಲ್ಲಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಶಾಸಕ ರಾಮಣ್ಣ ಲಮಾಣಿ ನುಡಿದರು.

ಶಿರಹಟ್ಟಿ ತಾಲೂಕಿನ ಹೆಬ್ಬಾಳದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವಣರದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಸರ್ಕಾರದ ಒಂದು‌‌ ಮಹತ್ವಾಕಾಂಕ್ಷೆ ಕಾರ್ಯಕ್ರಮವಾಗಿದ್ದು ಗ್ರಾಮದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.ಕಂದಾಯ ವಿಷಯಗಳಾದ ಪಿಂಚಣಿ,ಪಹಣಿ ತಿದ್ದುಪಡಿ, ಮುಂತಾದ ಕಂದಾಯ ವಿಷಯಗಳಿಗೆ ಸಂಬಂಧಿಸಿದ‌ ಸಮಸ್ಯೆಗಳನ್ನು ಸ್ಥಳದಲ್ಲಿಯೇ ನಿವಾರಿಸಿ ಆದೇಶ ಪ್ರತಿಗಳನ್ನು ವಿತರಿಸಲಾಗುವದು.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ‌ ರಾಮಣ್ಣ ಲಮಾಣಿ ತಿಳಿಸಿದರು.

ಸೌಲಭ್ಯ ವಿತರಣೆ: ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ವತಿಯಿಂದ ಮಾಸಾಶನ ಆದೇಶ ಪ್ರತಿ,ಆರೋಗ್ಯ ಇಲಾಖೆ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಕಿಟ್,ತೊಟಗಾರಿಕೆ ಇಲಾಖೆ ವತಯಿಂದ ತರಕಾರಿ ಬೆಳೆ ಮಿನಿ ಕಿಟ್,ಗೋಡಂಬಿ ಬೆಳೆ ಆದೇಶ ಪ್ರತಿ,ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಚೆಕ್,ಭೂ ದಾಖಲೆಗಳ ಇಲಾಖೆ ವತಿಯಿಂದ ಪಹಣಿಗಳನ್ನು,ವಿಕಲಚೇತನ ಹಾಗೂ ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆ ವತಿಯಿಂದ ಯುಡಿಆಯ್ಡಿ ಕಾರ್ಡ ಹಾಗೂ ಶ್ರವಣ ಸಾಧನಗಳನ್ನು ಫಲಾನುಭವಿಗಳಿಗೆ ಶಾಸಕರಾದ ರಾಮಣ್ಣ ಲಮಾಣಿ,ಗ್ರಾ.ಪಂ.‌ಅಧ್ಯಜ್ಷೆ ಪುಷ್ಪಾ ಕಾಮತೆಡ್ಡಿ,ಉಪಾಧ್ಯಕ್ಷೆ ಗೌರಮ್ಮ ಬಂಡಿವಡ್ಡರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್,ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ.ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅವರುಗಳು ವಿತರಿಸಿದರು.

Edited By : Nagaraj Tulugeri
Kshetra Samachara

Kshetra Samachara

17/09/2022 08:30 pm

Cinque Terre

6.76 K

Cinque Terre

0

ಸಂಬಂಧಿತ ಸುದ್ದಿ