ಗದಗ: ಭಾರತೀಯ ಸೇನೆಯಿಂದ ನಿವೃತ್ತಿಗೊಂಡು ಮರಳಿ ತವರಿಗೆ ಆಗಮಿಸಿದ ಯೋಧ ಅಂಜಾದ್ ಹೆಸರೂರ ಅವರಿಗೆ ಸ್ಥಳೀಯ ಬೃಂದಾವನ ಹೋಟೆಲ್ ನಲ್ಲಿ ಭರ್ಜರಿ ಸ್ವಾಗತ ಮತ್ತು ಸನ್ಮಾನ ನಡೆಯಿತು.
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಆತ್ಮೀಯತೆಯಿಂದ ಭರ್ಜರಿಯಾಗಿಯೇ ಸನ್ಮಾನಿಸಲಾಯಿತು.
ದೇಶ ರಕ್ಷಣೆಗೆ ತಮ್ಮ ಪ್ರಾಣ ಮುಡಿಪಾಗಿಟ್ಟು ಸೇವೆ ಸಲ್ಲಿಸೋ ಯೋಧರ ಧೈರ್ಯ, ರಾಷ್ಟ್ರಪ್ರೇಮ ಪ್ರತಿ ಯುವಕರಲ್ಲಿ ಒಡ ಮೂಡಬೇಕು. ಮಳೆ-ಗಾಳಿ- ಚಳಿಯನ್ನು ಲೆಕ್ಕಿಸದೆ ದೇಶದ ಸೇವೆಗೆ ಸದಾ ಸಿದ್ಧರಿರುವ ಯೋಧರು ತಮ್ಮ ಕುಟುಂಬದ ಮಮತೆಯಿಂದ ದೂರವಿದ್ದರೂ ತಾಯಿ ಭಾರತಾಂಬೆಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇಂತಹ ಯೋಧರ ಗುಣ ವಿಶೇಷಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕೆಂಬ ಸಂದೇಶ ಈ ಕಾರ್ಯಕ್ರಮದಲ್ಲಿ ಮೂಡಿ ಬಂತು.
ಸೇನಾ ನಿವೃತ್ತಿಗೊಂಡ ಸೈನಿಕ ಅಂಜಾದ್ ಹೆಸರೂರ ಮಾತನಾಡಿ. 22 ವರ್ಷ 7 ತಿಂಗಳ ಕಾಲ ಭಾರತ ಮಾತೆಯ ಸೇವೆ ಮಾಡಿ ತಾಯ್ನಾಡಿಗೆ ಮರಳಿ ಬಂದಿದ್ದೇನೆ. ನನ್ನ ದೇಶದ ರಕ್ಷಣೆಗಾಗಿ ಹಗಲಿರುಳು ಸೇವೆ ಮಾಡಿದ ತೃಪ್ತಿ ನನಗಿದೆ. ಇನ್ನು ಮುಂದಿನ ನನ್ನ ವಿಶ್ರಾಂತಿ ಜೀವನದಲ್ಲಿ ನನ್ನ ಸಂಸಾರದ ಜೊತೆ ತಾಲೂಕಿನ ಯುವಜನರಿಗೆ ಸೈನ್ಯ ಸೇರಿ ದೇಶಸೇವೆ ಮಾಡಲು ಉತ್ತಮ ಮಾರ್ಗದರ್ಶನ ನೀಡುತ್ತೇನೆ ಎಂದರು.
PublicNext
11/09/2022 08:20 am