ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸುವರ್ಣ ಪ್ರಶಸ್ತಿ ವಿಜೇತ ಸುರೇಶ್ ಲಮಾಣಿಗೆ ಗ್ರಾಮಸ್ಥರ ಅದ್ಧೂರಿ ಸನ್ಮಾನ

ಗದಗ: ಸುವರ್ಣ ಪ್ರಶಸ್ತಿ ವಿಜೇತ ಸುರೇಶ್ ಲಮಾಣಿಗೆ ಕಳಸಾಪುರ ತಾಂಡಾದ ಗ್ರಾಮಸ್ಥರು ಅದ್ಧೂರಿ ಸನ್ಮಾನ ಮಾಡಿ ಗೌರವಿಸಿದರು. ಹಲವಾರು ದಶಕಗಳ ಕಾಲ ಜಾನಪದ ಕಲೆಗೆ ತಮ್ಮದೇ ಆದ ಕೊಡುಗೆ ನೀಡಿರೋ ಸುರೇಶ್ ಲಮಾಣಿಯವರಿಗೆ ಇತ್ತೀಚಿಗೆ ರಾಜ್ಯ ಸರಕಾರ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮೂಲತಃ ಗದಗ ತಾಲೂಕಿನ ಕಳಸಾಪುರ ತಾಂಡಾದ ನಿವಾಸಿಯಾಗಿರೋ ಸುರೇಶ್ ಲಮಾಣಿಯವರಿಗೆ ನೀಡಿದ ಪ್ರಶಸ್ತಿ ಇಡೀ ಗ್ರಾಮಕ್ಕೆ ಸಂದ ಗೌರವ ಅಂತ ಗ್ರಾಮಸ್ಥರು ಕೊಂಡಾಡಿದ್ದಾರೆ. ಕಳಸಾಪುರ ತಾಂಡಾದ ನಾಗರಿಕರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಬಿಜೆಪಿ ಮುಖಂಡ ಪರಮೇಶ್ ನಾಯಕ್ ನೇತೃತ್ವದಲ್ಲಿ ಈ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಶ್ರೀಯುತರಿಗೆ ಗೌರವ ಸಲ್ಲಿಸಿದರು.

Edited By : Manjunath H D
PublicNext

PublicNext

08/12/2024 03:41 pm

Cinque Terre

32.19 K

Cinque Terre

0