ಗದಗ: ಚಿಕನ್ ಪಾರ್ಟಿಗೆ ಕರೆದು ಕೊಂಡು ಬಂದು ಗೆಳೆಯನನ್ನೇ ಕೊಂದ ಗಳೆಯ.ಅನೈತಿಕ ಸಂಬಂಧದ ಶಂಕೆಯಲ್ಲಿ ನಡೀತಾ ಈ ಕೊಲೆ.ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ನಡೆದಿದೆ ಈ ಮರ್ಡರ್.
ಕೊತಬಾಳ ಗ್ರಾಮದ ಸಿದ್ದಪ್ಪ ಪಾಗದ 48 ಕೊಲೆಯಾದ ವ್ಯಕ್ತಿ. ಚಿಕನ್ ಪಾರ್ಟಿ ಮಾಡಿಸಿ ಗೆಳೆಯನನ್ನ ಕೊಂದ ಮಹಾಂತೇಶ್, ಸ್ನೇಹಿತನ ಶವವನ್ನ ಪಕ್ಕದ ಹಳ್ಳದಲ್ಲಿ ಸರಿಯಾಗಿ ಹೂತುಹಾಕದೇ ಪರಾರಿಯಗಿದ್ದ. ರೋಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಮಹಾಂತೇಶನನ್ನ ಬಂಧಿಸಿದ್ದಾರೆ.
Kshetra Samachara
23/10/2021 08:39 am