ಗದಗ: 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ 40 ವರ್ಷದ ಕಾಮುಕನಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
16 ಮೇ 2020ರಂದು ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣ ನಡೆದಿತ್ತು.
ತಂದೆ-ತಾಯಿ ಗೋವಾಗೆ ದುಡಿಯಲು ಹೋಗಿದ್ದರು. ಬಾಲಕಿ, ಊರಲ್ಲಿ ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಳು. ಮನೆ ಮುಂದೆ ಆಟ ಆಡುತ್ತಿದ್ದ 11 ವರ್ಷದ ಬಾಲಕಿಯನ್ನು ಧಾರಾವಾಹಿ ನೋಡಲು ಮನೆಯೊಳಗೆ ಕರೆದಿದ್ದ. ಒಂದು ಧಾರಾವಾಹಿ ನೋಡಿ ಮರಳಿ ಬರುವಾಗ ಇನ್ನೊಂದು ಧಾರಾವಾಹಿ ಚೆನ್ನಾಗಿದೆ ನೋಡು ಅಂದಿದ್ದಾನೆ.
ಆಗ ಬಾಲಕಿ ಬೇಡ ಎಂದು ಬರುವಾಗ, ರೂಮ್ ಗೆ ಹೊತ್ತೊಯ್ದು ಕೈಕಾಲು ಕಟ್ಟಿ ಹಾಕಿ, ತನ್ನ ವಿಕೃತ ಕಾಮ ಮೆರೆದಿದ್ದಾನೆ. ಇದನ್ನು ಯಾರ ಬಳಿಯಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಸಂತ್ರಸ್ತ ಬಾಲಕಿ ನೋವು ತಾಳಲಾರದೇ ತನ್ನ ಅಜ್ಜಿ ಬಳಿ ನಡೆದ ಘಟನೆ ಹೇಳಿದ್ದಾಳೆ.
ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2 ವರ್ಷದ ವಿಚಾರಣೆ ನಂತರ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷಗಳ ಕಾರಾಗೃಹದ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ತೀರ್ಪು ಪ್ರಕಟಿಸಿದ್ದಾರೆ.
PublicNext
10/09/2022 05:42 pm