ಇನ್ಮುಂದೆ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದೆ. ನಿನ್ನೆ (ಶನಿವಾರ) ಸಂಜೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್, ಸೀರಿಯಲ್ ನಿಂದ ಅನಿರುದ್ಧ್ ಅವರನ್ನು ಕೈ ಬಿಡುವ ವಿಚಾರವಾಗಿ ವಾಹಿನಿಯು ಕೂಡ ಒಪ್ಪಿಕೊಂಡಿದ್ದು, ಇನ್ಮುಂದೆ ನಮ್ಮ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ನಟಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದರು.
ಆಗಿದ್ದೇನು?
ಆಗಷ್ಟ್ 18ರಂದು ಮಧ್ಯಾಹ್ನ 'ಜೊತೆಜೊತೆಯಲಿ' ಶೂಟಿಂಗ್ ಸೆಟ್‌ನಲ್ಲಿ ಅನಿರುದ್ಧ್ ಕಿರಿಕ್ ಮಾಡಿದ್ದಾರೆ. ಧಾರಾವಾಹಿಯ ಡೈಲಾಗ್ ಬದಲಿಸುವಂತೆ ನಿರ್ದೇಶಕ ಮಧು ಉತ್ತಮ್ ಬಳಿ ಖ್ಯಾತೆ ತೆಗೆದಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಈ ಧಾರಾವಾಹಿಯಲ್ಲಿ ನಟಿಸಲ್ಲ ಎಂದು ಹೊರನಡೆದಿದ್ದಾರೆ ಅನ್ನೋದು ಅನಿರುದ್ದ್ ಮೇಲಿರುವ ಆರೋಪ. ಈ ಕಾರಣಕ್ಕೆ ಧಾರಾವಾಹಿ ನಿರ್ಮಾಪಕ ಅರೂರು ಜಗದೀಶ್ ಕಿರುತೆರೆ ನಿರ್ಮಾಪಕರ ಸಂಘಕ್ಕೆ ಹಾಗೂ ಜೀ ವಾಹಿನಿಗೆ ದೂರು ನೀಡಿದ್ದರು. ಆ ಬಳಿಕವೇ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಸಭೆ ಸೇರಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗಿದೆ.
ಧಾರಾವಾಹಿ ನಿರ್ಮಾಪಕರೆಲ್ಲರೂ ಒಕ್ಕೊರಲಿನಿಂದ ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿ ಹಾಗೂ ರಿಯಾಲಿಟಿ ಶೋನಿಂದ ಬ್ಯಾನ್ ಮಾಡುವಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
PublicNext
21/08/2022 08:02 am