ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸೆಪ್ಟಂಬರ್ 30ರಂದು ಸಿನಿಮಾ ರಿಲೀಸ್ ಆಗಲಿದ್ದು, ಇದೀಗ ಚಿತ್ರದಲ್ಲಿ ಟ್ರೈಲರ್ ಬಿಡುಗಡೆಯಾಗಿದೆ.
3 ನಿಮಿಷದ ಕಾಂತಾರ ಸಿನಿಮಾ ಟ್ರೈಲರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ಯಾಂಡಲ್ವುಡ್ನ ಘಟಾನುಘಟಿಗಳು ಸಹ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರ್ ನಲ್ಲಿ ದೈವ ದೃಶ್ಯವನ್ನು ಅದ್ಭುತವಾಗಿ ಚಿತ್ರಿಕರಿಸಲಾಗಿದೆ. ರಿಷಬ್ ಶೆಟ್ಟಿ ಸಿನಿಮಾ ಬಗ್ಗೆ ಭಾರಿ ಕುತೂಹಲ ಮೂಡಿಸಿದ್ದಾರೆ. ಕಂಬಳ ದೃಶ್ಯವನ್ನು ಟ್ರೇಲರ್ನಲ್ಲಿ ಕಾಣಬಹುದಾಗಿದೆ. ಕಂಬಳದ ಸ್ಪರ್ಧಿಯಾಗಿ ಓಟಕ್ಕಿಳಿಯೋ ರಿಷಬ್ ಟ್ರೈಲರ್ ಮೂಲಕವೇ ಸಖತ್ ಸದ್ದು ಮಾಡ್ತಿದ್ದಾರೆ.
ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಎಂಬ ಅದ್ಭುತ ಹಾಡು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದು, ನಾಯಕ ನಟನಾಗಿ ಕೂಡಾ ಅವರೇ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾದ ಚಿತ್ರದ ಹೊಸ ಸಿಂಗಾರ ಸಿರಿಯೇ ಹೆಸರಿನ ಹಾಡು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಈ ಹಾಡಿಗೆ ತಲೆದೂಗಿದ್ದಾರೆ. ಈ ಸಾಂಗ್ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಿದೆ.
PublicNext
05/09/2022 06:27 pm