ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಶಾಂತ್ ಸಿಂಗ್ ಸಾವಿಗೆ ಬಿಗ್ ಟ್ವಿಸ್ಟ್;ಮಾದಕ ಸೇವನೆಗೆ ಕುಮ್ಮಕ್ಕು ನೀಡಿರೋದು ರಿಯಾ ಚಕ್ರವರ್ತಿನೇ !

ಮುಂಬೈ:ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ಸಾವಿಗೆ ನ್ಯಾಯವೇ ಸಿಕ್ಕಿಲ್ಲ. ಆದರೂ, ತನಿಖೆ ನಡೀತಾನೇ ಇದೆ. ಹೀಗಿರೋವಾಗ್ಲೇ ಎನ್‌ಸಿಬಿ ಈಗ ಮಹತ್ವದ ಮಾಹಿತಿಯನ್ನ ಕೊಟ್ಟಿದೆ.

ಹೌದು. ಸುಶಾಂತ್ ಸಿಂಗ್ ರಜಪೂತ್ ಮಾದಕ ವ್ಯಸನಿಯಾಗಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ್ದು ಮಾತ್ರ ಬೇರೆ ಯಾರೋ ಅಲ್ಲ. ಅದು ರಿಯಾ ಚಕ್ರವರ್ತಿ ಎಂದು ಎನ್‌ಸಿಬಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಕೇಸ್ ನಲ್ಲಿ ಎನ್‌ಸಿಬಿ ಈಗಾಗಲೇ 35 ಆರೋಪಿಗಳ ವಿರುದ್ಧ 38 ಆರೋಪಗಳನ್ನ ಹೊರಿಸಿದೆ.

Edited By :
PublicNext

PublicNext

13/07/2022 11:40 am

Cinque Terre

51.63 K

Cinque Terre

9