ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಬಂಗಾರದ ಆಭರಣ ಕಳವು ಮಾಡಿದ್ದ ಮಹಿಳೆ - 24 ಗಂಟೆಯೊಳಗೆ ಬಂಧನ

ದಾವಣಗೆರೆ: ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ಬಂಗಾರದ ಆಭರಣ ಕಳವು ಮಾಡಿದ್ದ ಮಹಿಳೆಯೊಬ್ಬರನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿರುವ ಕೆಟಿಜೆ ನಗರ ಠಾಣೆ ಪೊಲೀಸರು, 4,88,000 ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆಯ ಶ್ರೀರಾಮನಗದ ನಿವಾಸಿ ಎಚ್‌.ಸಾಕಮ್ಮ ಬಂಧಿತರು. ಮನೆಯಲ್ಲಿಟ್ಟಿದ್ದ ಆಭರಣಗಳನ್ನು ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೇ ಕಳವು ಮಾಡಿರುವ ಬಗ್ಗೆ ಅನುಮಾನವಿದೆ’ ಎಂದು ಜಯನಗರ ಎ ಬ್ಲಾಕ್ ನಿವಾಸಿ ಉಮಾ ಮಹೇಂದ್ರಕರ್ ದೂರು ನೀಡಿದ್ದರು. ಪೊಲೀಸರು ಸಾಕಮ್ಮ ಅವರನ್ನು ವಿಚಾರಣೆ ನಡೆಸಿ, ಕಳವು ಮಾಡಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Edited By : Vijay Kumar
PublicNext

PublicNext

13/11/2024 12:20 pm

Cinque Terre

13.23 K

Cinque Terre

0

ಸಂಬಂಧಿತ ಸುದ್ದಿ