ವಾಷಿಂಗ್ಟನ್: ಸೆಕ್ಸ್ ವೇಳೆ ಪರಸ್ಪರ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಕಾನೂನುಬಾಹಿರ ಮಾಡಲು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ಮುಂದಾಗಿದೆ ಎನ್ನಲಾಗಿದೆ.
ಹೌದು. ಮಹಿಳೆಯ ಒಪ್ಪಿಗೆಯಿಲ್ಲದೆ ಸೆಕ್ಸ್ ಮಾಡುವಾಗ ಪುರುಷ ಕಾಂಡೋಮ್ ಅನ್ನು ತೆಗೆಯುವುದನ್ನು ''ಸ್ಟೆಲ್ಟಿಂಗ್'' ಎಂದು ಕರೆಯುತ್ತಾರೆ. ಕ್ಯಾಲಿಫೋರ್ನಿಯಾ ಅಸೆಂಬ್ಲಿ ಸದಸ್ಯ ಕ್ರಿಸ್ಟಿನಾ ಗಾರ್ಸಿಯಾ ಈ ವಾರ ಪರಿಚಯಿಸಿದ ಮಸೂದೆಯು ಸ್ಟೆಲ್ಟಿಂಗ್ ಅನ್ನು ಲೈಂಗಿಕ ಬ್ಯಾಟರಿ ಎಂದು ವರ್ಗೀಕರಿಸಿದೆ. ಈ ಕಾನೂನು ಅಂಗೀಕಾರವಾದರೆ ಅಮೆರಿಕದ ಯಾವುದೇ ರಾಜ್ಯದಲ್ಲಿ ಒಪ್ಪಿಗೆ ಇಲ್ಲದ ಸೆಕ್ಸ್ ವೇಳೆ ಕಾಂಡೋಮ್ ತೆಗೆಯುವುದು ಕಾನೂನುಬಾಹಿರವಾಗಲಿದೆ. ಆದರೆ ಇದು ಜೈಲು ಶಿಕ್ಷೆಗೆ ಕಾರಣವಾಗುವುದಿಲ್ಲ ಎಂದೂ ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಾರ್ಸಿಯಾ, "ನಾನು 2017ರಿಂದ ಸ್ಟೆಲ್ಟಿಂಗ್ ವಿಷಯದ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಈ ಕೃತ್ಯ ಎಸಗುವವರಿಗೆ ಸ್ವಲ್ಪ ಹೊಣೆಗಾರಿಕೆ ಇರುವವರೆಗೂ ನಾನು ನಿಲ್ಲುವುದಿಲ್ಲ. ಲೈಂಗಿಕ ದೌರ್ಜನ್ಯಗಳು, ವಿಶೇಷವಾಗಿ ಕಪ್ಪು ಬಣ್ಣದ ಮಹಿಳೆ ಮೇಲೆ ಹೆಚ್ಚಾಗಿ ನಡೆಯುತ್ತವೆ. ಕಾನೂನಿನ ಕಣ್ಣಿಗೆ ಇದು ಬೀಳುವುದೇ ಇಲ್ಲ'' ಎಂದು ತಿಳಿಸಿದ್ದಾರೆ.
ಈ ಮೂಲಕ ಕಾಂಡೋಮ್‌ಗಳನ್ನು ಹಾಳು ಮಾಡುವುದನ್ನು ತಡೆಯಲು ಕ್ಯಾಲಿಫೋರ್ನಿಯಾ ರಾಜ್ಯ ಮುಂದಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆ ನಡೆದಿದೆ.
PublicNext
12/02/2021 09:22 pm