ಶಿವಮೊಗ್ಗ: ನಗರದಲ್ಲಿ ಕುಳಿತು ರಾಜ್ಯದ ಕೆಲವು ಕಡೆ ಬಾಂಬ್ ಬ್ಲ್ಯಾಸ್ಟ್ ಮಾಡಲು ಐಸಿಸ್ ಗ್ಯಾಂಗ್ ಸಂಚು ನಡೆಸಿತ್ತು ಎಂಬ ಸ್ಫೋಟಕ ಮಾಹಿತಿ ಪಬ್ಲಿಕ್ ನೆಕ್ಸ್ಟ್‌ಗೆ ಸಿಕ್ಕಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನೀಡಿದ ದೂರಿನ ಮೇರೆಗೆ ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ದೂರಿನ ಅನ್ವಯ ಕೂಡಲೇ ತನಿಖೆ ಶುರು ಹಚ್ಚಿಕೊಂಡ ಪೊಲೀಸರಿಗೆ ಭಯಾನಕ ಮಾಹಿತಿ ತಿಳಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ತರಬೇತಿ ಪಡೆದಿದ್ದ ಮೂವರು ಶಂಕಿತ ಉಗ್ರರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. A1- ಶಾರಿಕ್ , ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನು A2- ಮಾಜ್ , ಮಂಗಳೂರು ನಿವಾಸಿ A3 - ಸೈಯದ್ ಯಾಸಿನ್ @ಬೈಲು ಎಂಬುವರೇ ಬಂಧಿತ ಶಂಕಿತ ಉಗ್ರರು. ಈ ಬಂಧಿತ ಆರೋಪಿಗಳು ರಾಜ್ಯದ ಹಲವೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕೊಂಚ ಹುಷಾರು ತಪ್ಪಿದ್ದರೆ ಭಾರಿ ಅನಾಹುತವೇ ನಡೆದು ಹೋಗುವ ಸಂಭವ ಇತ್ತು. ಬಾಂಬ್ ಬ್ಲ್ಯಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ಟ್ರೈನಿಂಗ್ ಪಡೆದಿದ್ದ ಈ ಗ್ಯಾಂಗ್ ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿವೆ. ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಶಂಕಿತ ಉಗ್ರ ಕಿಂಗ್ ಪಿನ್ ಯಾಸಿನ್‌ನನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರೆಲ್ಲರ ಮೇಲೆ UAPA ಕೇಸ್ ದಾಖಲಿಸಿದ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದೇ ಗ್ಯಾಂಗ್ ರಾಷ್ಟ್ರ ಧ್ವಜವನ್ನು ಸುಟ್ಟಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.
PublicNext
20/09/2022 02:03 pm