ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತದಿಂದ ಜನ ತತ್ತರಿಸಿದ್ದಾರೆ. ಸರ್ಕಾರ ಹಾಗೂ ವ್ಯವಸ್ಥೆ ಮೇಲೆ ಜನರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಈ ನಡುವೆ ಪೆಟ್ರೋಲ್-ಡೀಸೆಲ್‌ಗಾಗಿ ಆಹಾಕಾರ ಉಂಟಾಗಿದೆ. ಡೀಸೆಲ್ ಬಂಕ್‌ನಲ್ಲಿ ಡೀಸೆಲ್‌ಗಾಗಿ ಕಾಯುತ್ತಿದ್ದ ಟ್ರಕ್ ಚಾಲಕ ಮೃತಪಟ್ಟಿದ್ದಾರೆ. ಪಶ್ಚಿಮ ಶ್ರೀಲಂಕಾದ ಅಂಗುರುವಾತೋಟದ ಪಿಲ್ಲಿಂಗ್ ಸ್ಟೇಶನ್ ಒಂದರಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ 63 ವಯಸ್ಸಿನ ಟ್ರಕ್ ಚಾಲಕ ಮೃತಪಟ್ಟಿದ್ದು ಸರತಿ ಸಾಲಿನಲ್ಲಿ ನಿಂತು ಮೃತಪಟ್ಟವರ ಸಂಖ್ಯೆ ಈ ಮೂಲಕ 10ಕ್ಕೇರಿದೆ. ಸರತಿ ಸಾಲಿನಲ್ಲಿ ನಿಂತು ಮೃತಪಟ್ಟವರು 43 ರಿಂದ 84 ವರ್ಷ ವಯಸ್ಸಿನ ಪುರುಷರೇ ಆಗಿದ್ದಾರೆ. ಈ ಪೈಕಿ ಹೆಚ್ಚಿನ ಸಾವುಗಳು ಹೃದಯಾಘಾತದಿಂದ ಸಂಭವಿಸಿದ್ದಾಗಿವೆ ಎಂದು ವರದಿಯಾಗಿದೆ. ವಾರದ ಹಿಂದೆ, 53 ವರ್ಷದ ವ್ಯಕ್ತಿಯೊಬ್ಬರು ಕೊಲಂಬೊದ ಪಾನದುರಾದ ಪೆಟ್ರೋಲ್ ಬಂಕ್‌ನಲ್ಲಿ ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಮೃತಪಟ್ಟಿದ್ದರು.
ಶ್ರೀಲಂಕಾದಲ್ಲಿ 2.2 ಕೋಟಿ ಜನಸಂಖ್ಯೆ ಇದೆ. 70 ವರ್ಷಗಳ ನಂತರ ಈ ದೇಶ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧನ ಕೊರತೆ, ಆಹಾರದ ಬೆಲೆಗಳಲ್ಲಿ ಏರಿಕೆ ಮತ್ತು ಔಷಧಗಳ ಕೊರತೆ ದೇಶವನ್ನು ಹೆಚ್ಚು ಭಾದಿಸುತ್ತಿದೆ.
PublicNext
23/06/2022 08:03 pm