ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಜಾಮೀನು ನೀಡಲು ಎನ್‌ಡಿಪಿಎಸ್ ಕೋರ್ಟ್ ನಿನ್ನೆ (ಬುಧವಾರ) ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್‌ನನ್ನು ಭೇಟಿಯಾಗಲು ಮುಂಬೈನ ಆರ್ಥರ್ ರೋಡ್ ಜೈಲಿಗೆ ತೆರಳಿದ್ದಾರೆ.
ಮುಂಬೈನ ಐಷಾರಾಮಿ ಹಡಗಿನಲ್ಲಿ ಅಕ್ಟೋಬರ್ 2ರಂದು ನಡೆಸುತ್ತಿದ್ದ ರೇವ್ ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿಕ್ಕಿಬಿದ್ದಿದ್ದರು. ಅಂದಿನಿಂದ ಇಂದಿನವರೆಗೆ ಶಾರುಖ್ ಪುತ್ರ ಎನ್‌ಸಿಬಿ ವಶದಲ್ಲಿದ್ದಾರೆ. ಆರ್ಥರ್ ಜೈಲಿಗೆ ಆರ್ಯನ್ ಖಾನ್‌ರನ್ನು ಶಿಫ್ಟ್ ಮಾಡಲಾಗಿದೆ. ಒಟ್ಟು ಮೂರು ಬಾರಿ ಜಾಮೀನು ಅರ್ಜಿ ನಿರಾಕರಣೆಯಾಗಿದೆ.
ಡ್ರಗ್ಸ್ ಕೇಸ್‌ನಡಿ ಎನ್‌ಡಿಪಿಎಸ್ ಕೋರ್ಟ್ ನಿನ್ನೆ ಶಾರುಖ್ ಖಾನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
PublicNext
21/10/2021 09:46 am