ಬೆಂಗಳೂರು: ಸ್ಯಾಂಡಲ್ ವುಡ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಮತ್ತೆ ಮೂವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ನಟ, ನಿರೂಪಕ ಅಕುಲ್ ಬಾಲಾಜಿ, R.V.ದೇವರಾಜ್ ಮಗ ಯುವರಾಜ್, ಸಂತೋಷ್ ಕುಮಾರ್ ಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದಾರೆ.
ಜೊತೆಗೆ ನಾಳೆ ಬೆಳಗ್ಗೆ 10ಕ್ಕೆ ಸಿಸಿಬಿ ಎದುರು ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ನೋಟಿಸ್ ಗೆ ಪ್ರತಿಕ್ರಿಯೆಸಿದ ಅಕುಲ್ ಬಾಲಾಜಿ, ನನಗೆ ಸಿಸಿಬಿ ಪೊಲೀಸರಿಂದ ನೋಟಿಸ್ ಬಂದಿದೆ.
ನಾನು ಈಗ ಹೈದರಾಬಾದ್ ನಲ್ಲಿದ್ದೀನಿ, ಹೀಗಾಗಿ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗ್ತೀನಿ ಎಂದಿದ್ದಾರೆ.
ಇನ್ನೂ ನಟ ಸಂತೋಷ್ ಕುಮಾರ್ ನಾನೀಗ ಮೈಸೂರಿನಲ್ಲಿದ್ದೇನೆ. ಹೀಗಾಗಿ ನಾಳೆ ಸಿಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ನಾನು ನಟಿ ಸಂಜನಾ ಬರ್ತ್ ಡೇ ಯಲ್ಲಿ ಭಾಗಿಯಾಗಿದ್ದೆ.
ಹೀಗಾಗಿ ಸಿಸಿಬಿ ಪೊಲೀಸರಿಂದ ನನಗೆ ನೋಟಿಸ್ ಬಂದಿರಬಹುದೆಂದು ಹೇಳಿದ್ದಾರೆ.
PublicNext
18/09/2020 02:52 pm