ಬೆಂಗಳೂರು: ಬಹುಭಾಷಾ ನಟಿ ಶ್ರೀಲೀಲಾ ತಾಯಿ ಸ್ವರ್ಣ ಲತಾ ವಿರುದ್ಧ ಬೆಂಗಳೂರಿನಲ್ಲಿ ಎಫ್ ಐ ಆರ್ ದಾಖಲಾಗಿದ್ದು ಸದ್ಯ ಅವರಿಗೆ ಬಂಧನದ ಭೀತಿ ಶುರುವಾಗಿದೆ.ಹೌದು ಸ್ವರ್ಣ ಲತಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.ಸೆಪ್ಟಂಬರ್ 10ರಂದು ಸ್ವರ್ಣ ಲತಾ ಅಲಯನ್ಸ್ ವಿವಿಯೊಳಗೆ ಮಧುಕರ್ ಅಂಗೂರು ಜೊತೆ ಸೇರಿ ಅಕ್ರಮವಾಗಿ ಮಾರಕಾಸ್ತ್ರಗಳೊಂದಿಗೆ ನುಗ್ಗಿರುವ ಆರೋಪವಿದೆ.
ಈ ಬಗ್ಗೆ ಅಲಯನ್ಸ್ ವಿವಿ ವಕ್ತಾರರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಸ್ವರ್ಣ ಲತಾ ಸೇರಿದಂತೆ ಪ್ರಕರಣ ಸಂಬಂಧ ಏಳು ಮಂದಿ ವಿರುದ್ದ ದೂರು ದಾಖಲಾಗಿದ್ದು, ಸ್ವರ್ಣ ಲತಾ ಅವರಿಗಾಗಿ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ.
PublicNext
15/09/2022 11:01 am