ಮುಂಬೈ : ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ವುಡ್ ನಲ್ಲಿಯೂ ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧಿಸಿದಂತೆ ಅನೇಕರ ಹೆಸರು ಕೇಳಿಬಂದಿದ್ದು ಸದ್ಯ ನಟಿ ದೀಪಿಕಾ ಪಡುಕೋಣೆಯವರು ಇಂದು (ಶನಿವಾರ) ಮಾದಕ ವಸ್ತು ನಿಯಂತ್ರಣ ದಳ (ಎನ್'ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬಾಲಿವುಡ್' ನ ದೀಪಿಕಾ ಪಡುಕೋಣೆಯವರು ಡ್ರಗ್ಸ್'ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದ ವಾಟ್ಸ್'ಆಪ್ ಗ್ರೂಪ್'ಗೆ ದೀಪಿಕಾ ಅವರೇ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ.
ಈ ಗ್ರೂಪ್'ಗೆ ಡಿಪಿ ಕೆಎ ಕ್ವಾನ್ ಎಂಬ ಹೆಸರಿಡಲಾಗಿತ್ತು, ಡಿಪಿ ಎಂದರೆ ದೀಪಿಕಾ ಪಡುಕೋಣೆ, ಕೆಎ ಎಂದರೆ ಕರೀಷ್ಮಾ, ಕ್ವಾನ್ ಎಂದರೆ ಕ್ವಾನ್ ಕಂಪನಿಯಾಗಿದೆ ಎಂದು ಖಾಸಗಿ ಟಿವಿಯೊಂದು ವರದಿ ಮಾಡಿದೆ.
ಇನ್ನೂ ದೀಪಿಕಾ ಜೊತೆ ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಕೂಡ ವಿಚಾರಣೆ ಎದುರಿಸಲಿದ್ದಾರೆ.
PublicNext
26/09/2020 11:19 am