ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ನಗರದ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಅಮೆರಿಕನ್ ಮಹಿಳೆ ಭಾರತೀಯ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾಳೆ.
ಕ್ಷುಲ್ಲಕ ವಿಚಾರಕ್ಕೆ ಕ್ಯಾತೆ ತೆಗೆದ ಮಹಿಳೆ, ಭಾರತೀಯ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿದ್ದಾಳೆ. 'ನಾನು ಎಲ್ಲಿಗೆ ಹೋದರೂ ಹೇಳೋದಿಷ್ಟೇ..ಭಾರತೀಯರಾದ ನೀವು ಇಲ್ಲಿಗ್ಯಾಕೆ ಬರ್ತೀರಿ? ಇಲ್ಲಿ ಬಂದ ಮೇಲೆ ಭಾರತವನ್ನೇಕೆ ಹೊಗಳುತ್ತೀರಿ? ಭಾರತ ತುಂಬ ಚೆನ್ನಾಗಿದ್ದರೆ ನೀವೆಲ್ಲ ಇಲ್ಲಿಗೆ ಯಾಕೆ ಬಂದಿದ್ದೀರಿ? ಐ ಹೇಟ್ ಇಂಡಿಯನ್ಸ್, ನೀವು ಇಲ್ಲಿಂದ ಹಿಂತಿರುಗಿ ಹೋಗಿ ಎಂದು ಹೈಡ್ರಾಮಾ ಮಾಡಿದ್ದಾಳೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಭಾರತೀಯ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾಳೆ.
ಇಷ್ಟೆಲ್ಲ ರಂಪಾಟ ಸೃಷ್ಟಿಸಿದ್ದ ಈ ಮಹಿಳೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
PublicNext
26/08/2022 01:26 pm